Wednesday, September 9, 2026
spot_imgspot_img
spot_imgspot_img

ಸುಳ್ಯ: ಮಲಗಿದಲ್ಲೇ ಸಾವನ್ನಪ್ಪಿದ ವ್ಯಕ್ತಿ

- Advertisement -
- Advertisement -

ಸುಳ್ಯ; ಮಲಗಿದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಅಜ್ಜಾವರ ಗ್ರಾಮದ ಮುಳಿಯ ಹೊಸಗದ್ದೆ ನಿವಾಸಿ ಬಾಬು (60)ಮೃತ ದುರ್ದೈವಿ. ನಿನ್ನೆ ಸಂಜೆಯಿಂದಲೇ ಅವರು ಮದ್ಯಪಾನ ಮಾಡಿ ಸ್ಥಳೀಯ ಪರಿಸರದಲ್ಲಿ ಮಲಗಿಕೊಂಡಿದ್ದರೆನ್ನಲಾಗಿದೆ.

ಇಂದು ಬೆಳಿಗ್ಗೆ ವಿವೇಕಾನಂದ ಸರ್ಕಲ್ ಬಳಿಯ ಗುಜುರಿ ಅಂಗಡಿಯ ಬಳಿ ಇರುವ ಗೂಡಂಗಡಿಯ ಪಕ್ಕದ ಜಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕಲ್ಲಿನ ಬೆಂಚಿನ ಮೇಲೆ ಅವರು ಮಲಗಿದ್ದಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ಗೂಡಂಗಡಿಯ ಮಾಲೀಕ ಚಂದ್ರಶೇಖರ ಎಂಬುವವರು ಬೆಳಿಗ್ಗೆ ಬಂದು ತನ್ನ ಅಂಗಡಿ ತೆರೆಯುವ ವೇಳೆ ಘಟನೆ ಬೆಳಕಿಗೆ ಬಂದಿದ್ದು ಕೂಡಲೇ ಅವರು ಬಾಬು ಅವರ ಮನೆಯವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!