ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಕೃಷ್ಣ ಶಾಖೆ, ಪೆರುವಾಯಿ ವತಿಯಿಂದ ಬೃಹತ್ ವಾಹನ ಜಾಥಾ





ಪೆರುವಾಯಿ: ಭಾರತೀಯ ಸೇನೆಯಲ್ಲಿ 23 ವರ್ಷಗಳ ಕಾಲ ಸುದೀರ್ಘ ಹಾಗೂ ನಿಷ್ಠಾವಂತರಾಗಿ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸುತ್ತಿರುವ ವೀರ ಯೋಧ ಶ್ರೀ ಚಂದ್ರಶೇಖರ ಪೂಜಾರಿ, ಕಲ್ಲಡ್ಕ – ಪೆರುವಾಯಿ ಅವರಿಗೆ ಗೌರವಪೂರ್ವಕವಾಗಿ ಹುಟ್ಟೂರ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ, ಪೆರುವಾಯಿ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು,ದಿನಾಂಕ: 13-09-2026ನೇ ಭಾನುವಾರ ಸಂಜೆ 4.00 ಗಂಟೆಗೆ ಬೃಹತ್ ವಾಹನ ಜಾಥಾ ನಡೆಯಲಿದೆ.

ಕುದ್ದುಪದವುನಿಂದ ಹೊರಟು ಪೆರುವಾಯಿ ಜಂಕ್ಷನ್ ಮೂಲಕ ಪೆರುವಾಯಿ ಕಲ್ಲಡ್ಕದಲ್ಲಿರುವ ಶ್ರೀ ಚಂದ್ರಶೇಖರ ಪೂಜಾರಿ ಅವರ ನಿವಾಸದವರೆಗೆ ಬೃಹತ್ ವಾಹನ ಜಾಥಾ ಹಾಗೂ ಮೆರವಣಿಗೆ ನಡೆಯಲಿದೆ.23 ವರ್ಷಗಳ ಅಮೂಲ್ಯ ದೇಶ ಸೇವೆ ಸಲ್ಲಿಸಿದ ವೀರ ಯೋಧನಿಗೆ ಅದ್ದೂರಿಯಾಗಿ ಹುಟ್ಟೂರ ಸ್ವಾಗತ ನೀಡಿ, ಅವರ ತ್ಯಾಗ, ಸೇವೆ ಹಾಗೂ ದೇಶಭಕ್ತಿಗೆ ಗೌರವ ಸಲ್ಲಿಸೋಣ. ರಾಷ್ಟ್ರಭಕ್ತರಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ವೀರ ಯೋಧನಿಗೆ ಅದ್ದೂರಿ ಸ್ವಾಗತ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.








