- Advertisement -
- Advertisement -
ಹಾಡಹಗಲೇ ಬೇಕರಿಗೆ ನುಗ್ಗಿದ ದುಷ್ಕರ್ಮಿಗಳು ಮಾಲೀಕನಿಗೆ ಹಲ್ಲೆಗೈದ ಘಟನೆ ನಡೆದಿದೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ತಮಿಳು ಮೂಲದವರು ಎನ್ನಲಾದ ದುಷ್ಕರ್ಮಿಗಳ ಗುಂಪೊಂದು ಕರಾವಳಿ ಮೂಲದ ಬೇಕರಿಗೆ ನುಗ್ಗಿ ಧಾಂದಲೆ ನಡೆಸಿದ್ದಾರೆ.
ಈ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರ್ಮಿಕ ಪರಿಷತ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡು ಈ ರೀತಿಯಾಗಿ ಬರೆದುಕೊಂಡಿದ್ದಾರೆ.
ಜೆಪಿ ನಗರ ಬೇಕರಿಯಲ್ಲಿ ದಾಂದಲೆ ನಡೆಸಿ ಬೇಕರಿ ಮಾಲೀಕನಿಗೆ ಹೊಡೆದ ಕಿಡಿಕೇಡಿಗಳು. ದುಡಿದು ತಿನ್ನುವವರನ್ನು ಬಿಡದೆ ಕಾಡುತ್ತಿರುವ ಪುಡಿ ರೌಡಿಗಳ ಹೆಡೆಮುರಿ ಕಟ್ಟುವರೇ ಪುಟ್ಟೇನಹಳ್ಳಿ ಪೊಲೀಸರು.ಪದೇ ಪದೇ ಬೇಕರಿ ಮತ್ತು ಕಾಂಡಿಮೆಂಟ್ಸ್ ಹುಡುಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ವಿರೋಧಿಸಿ ನಡೆಯಬೇಕಿದೆ ದೊಡ್ಡ ಮಟ್ಟದ ಅಭಿಯಾನ ಎಂಬುವುದಾಗಿ ಬರೆದುಕೊಂಡಿದ್ದಾರೆ.
Watch Video: https://fb.watch/i4So9CLbcH/
- Advertisement -