- Advertisement -
- Advertisement -


ಉಡುಪಿ: ಯಕ್ಷಗಾನ ವೇಷಧಾರಿಗಳು ಹೋಟೆಲ್ ವೊಂದರಲ್ಲಿ ತಿಂಡಿ ಸಪ್ಲೈ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಯಕ್ಷಗಾನ ಪ್ರಿಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಯಕ್ಷಗಾನದ ಬಡಗುತಿಟ್ಟುವಿನ ಪುರುಷ ಹಾಗೂ ಸ್ತ್ರೀ ವೇಷವನ್ನು ತೊಟ್ಟ ಇಬ್ಬರು ಯುವಕರು, ದೊಡ್ಡ ಗಾತ್ರದ ಮಸಾಲೆ ದೋಸೆಯನ್ನು ತಂದು ಗ್ರಾಹಕರಿಗೆ ನೀಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಯಕ್ಷಗಾನವನ್ನು ಈ ರೀತಿಯಲ್ಲಿ ಬಳಸಿಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ.



- Advertisement -