Thursday, May 2, 2024
spot_imgspot_img
spot_imgspot_img

ಅಂದು ಡಿಕೆಶಿ ಕೈಯಲ್ಲಿ ಕಡ್ಸಲೆ..! ಇಂದು ತೇಜಸ್ವಿ ಸೂರ್ಯ ಕೈಯಲ್ಲಿ ಜೀಟಿಗೆ – ಹಲವರ ಆಕ್ರೋಶ

- Advertisement -G L Acharya panikkar
- Advertisement -

ದೈವಗಳಿಗೆ ಅವಮಾನ ಎಸಗುತ್ತಿರುವ ಘಟನೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಕಾಂತಾರ ಸಿನೆಮಾ ತೆರೆಕಂಡ ಬಳಿಕ ದೈವದ ವೇಷವನ್ನೇ ಅನುಕರಣೆ ಮಾಡಲಾಗುತ್ತಿದೆ. ಈಗ ಖ್ಯಾತ ಸಂಸದ, ಯುವ ವಾಗ್ಮಿ ತೇಜಸ್ವಿ ಸೂರ್ಯ ದೈವಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ತುಳುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲೆಂದರಲ್ಲಿ ತುಳುನಾಡಿನ ದೈವಾರಾಧನೆ ಪ್ರದರ್ಶನಗಳು ಹೆಚ್ಚಾಗುತ್ತಿದ್ದು, ದೈವಗಳ ಹೆಸರಿನಲ್ಲಿ ದುಡ್ಡು ಮಾಡುತ್ತಿವೆ. ಈ ವಿರುದ್ಧ ದೈವಾರಾಧಕರು ಸಿಡಿದೇಳುತ್ತಿರುವ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರಿಂದಲೂ ದೈವಾರಾಧನೆಗೆ ಅವಮಾನವಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ತಣಿಸಂದ್ರ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರೇರಿತ ರಾಷ್ಟ್ರೋತ್ಥನ ಪರಿಷತ್‌ನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಾರ್ಷಿಕೋತ್ಸವದ ವೇದಿಕೆಯಲ್ಲಿ ತುಳುನಾಡಿನ ದೈವಾರಾಧನೆ ಪ್ರದರ್ಶನ ನೀಡಿದ್ದು, ಸಂಸದ ತೇಜಸ್ವಿ ಸೂರ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ತೇಜಸ್ವಿ ಅವರು ತನ್ನ ಕಾಲಿಗೆ ಹಾಕಿದ್ದ ಶೂ ತೆಗೆಯದೇ ದೈವ ನರ್ತನದಲ್ಲಿ ಬಳಸುವ ಜೀಟಿಗೆಯನ್ನು ಕೈಯಲ್ಲಿ ಹಿಡಿದಿದ್ದು, ದೈವಾರಾಧನೆಗೆ, ದೈವ ನರ್ತಕರಿಗೆ ಅವಮಾನವಾಗುವಂತೆ ವರ್ತಿಸಿದ್ದಾರೆ.

ತೇಜಸ್ವಿ ಸೂರ್ಯ ಅವರ ಈ ವರ್ತನೆಯ ವಿರುದ್ಧ ದೈವಾರಾಧಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇಷ್ಟೆಲ್ಲಾ ಬೆಳವಣಿಗೆಗಳು ಮುಂದುವರೆಯುತ್ತಿದ್ದರೂ, ತುಳುನಾಡಿನ ಶಾಸಕರುಗಳು ಸಂಸದರು ಮೌನವಾಗಿರುವುದರ ಬಗ್ಗೆಯೂ ಕಿಡಿಕಾರಿದ್ದಾರೆ.

ಈ ಹಿಂದೆ ಕರಾವಳಿಗೆ ಆಗಮಿಸಿದ ಕನಕಪುರ ಬಂಡೆ ಡಿ ಕೆ ಶಿವಕುಮಾರ್ ಉಡುಪಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿರುವುದು ತಿಳಿದ ವಿಷಯ. ಈ ಕಾರ್ಯಕ್ರಮದಲ್ಲಿ ಕರಾವಳಿಯ ದೈವಾರಾಧನೆಯ ಪ್ರತೀಕವಾಗಿರುವ ಕಡ್ಸಲೆ (ದೈವದ ಖಡ್ಗ) ಯನ್ನು ನೀಡಿರುವುದು ಈಗ ಚರ್ಚೆಗೆ ಕಾರಣವಾಗಿತ್ತು.

ಡಿ ಕೆ ಶಿವಕುಮಾರ್ ಅವರಿಗೆ ಮುದ್ರಾಡಿ ಬ್ಲಾಕ್ ಕಾಂಗ್ರೆಸ್‌ನ ನಾಯಕ ಮಂಜುನಾಥ್ ಪೂಜಾರಿ ದೈವದ ಕಡ್ಸಲೆ ನೀಡಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಾಗಿತ್ತು.

- Advertisement -

Related news

error: Content is protected !!