Tuesday, March 19, 2024
spot_imgspot_img
spot_imgspot_img

ಅಕ್ರಮವಾಗಿ ಗಡಿ ದಾಟಲು ಯತ್ನ; ಭಾರತೀಯರು ಸೇರಿ 8 ಮಂದಿ ಮೃತ್ಯು

- Advertisement -G L Acharya panikkar
- Advertisement -

ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ದಾಟಲು ಯತ್ನಿಸಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಶವಗಳನ್ನು ಕೆನಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಓರ್ವ ಮಹಿಳೆ ಭಾರತ ಮೂಲದವರಾಗಿದ್ದು, ಹಲವರು ಕೆನಡಾ ಮೂಲದವರು ಎಂದು ಗುರುತಿಸಲಾಗಿದೆ.

ಸೇಂಟ್ ಲಾರೆನ್ಸ್ ನದಿಯ ಮೂಲಕ ದೋಣಿಯಲ್ಲಿ ಕೆನಡಾದಿಂದ ಅಕ್ರಮವಾಗಿ ಅಮೆರಿಕಾಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದು, ಆದರೆ ಇದರಿಂದ ವಿಫಲಗೊಂಡು ಕೆನಡಾ-ಅಮೆರಿಕಾ ಗಡಿ ಭಾಗದ ಜವುಗು ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಕೆನಡಾ ಅಧಿಕಾರಿಗಳು ಮಾತನಾಡಿದವರು, ಈ ಪ್ರದೇಶದಲ್ಲಿ ವೈಮಾನಿಕ ಶೋಧ ನಡೆಸಿದಾಗ ಮೊದಲ ಶವ ಪತ್ತೆಯಾಗಿದೆ. ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!