Sunday, April 28, 2024
spot_imgspot_img
spot_imgspot_img

ಅಕ್ರಮವಾಗಿ ಮಾರಲು ತಂದಿದ್ದ ಹಂದಿ ಚಿಪ್ಪು ಜಪ್ತಿ; ಇಬ್ಬರ ಬಂಧನ

- Advertisement -G L Acharya panikkar
- Advertisement -

ಬೆಂಗಳೂರು: ನಗರದಲ್ಲಿ ಹಂದಿ ಚಿಪ್ಪು ಮಾರುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 8 ಕೆಜಿ 200 ಗ್ರಾಂ ತೂಕದ ಹಂದಿ ಚಿಪ್ಪು ಜಪ್ತಿ ಮಾಡಲಾಗಿದೆ. ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಈ ಅಕ್ರಮ ಪತ್ತೆಯಾಗಿದೆ.

ದಕ್ಷಿಣ ಭಾರತದಲ್ಲಿ ಇದು ಅತ್ಯಂತ ದೊಡ್ಡ ಕಾರ್ಯಾಚರಣೆಯಾಗಿದೆ. ಬಳ್ಳಾರಿಯಲ್ಲಿ ಚಿಪ್ಪು ಹಂದಿ ಬೇಟೆಯಾಡಿದ್ದ ದುಷ್ಕರ್ಮಿಗಳು, ಬೆಂಗಳೂರಿನಲ್ಲಿ 1 ಲಕ್ಷಕ್ಕೆ ಮಾರಾಟ ಮಾಡಲು ತಂದಿದ್ದರು ಎಂದು ತಿಳಿದುಬಂದಿದೆ. ಇಬ್ರಾಹಿಂ, ಮರಿಸ್ವಾಮಿ ಎಂಬವರನ್ನು ಬಂಧಿಸಿ ಹಂದಿ ಚಿಪ್ಪು ಜಪ್ತಿ ಮಾಡಿಕೊಂಡಿದ್ದಾರೆ.

ಚೀನಾದಲ್ಲಿ ಹಂದಿ ಚಿಪ್ಪಿಗೆ ಅತ್ಯಂತ ಬೇಡಿಕೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದಕ್ಕೆ ಅಂದಾಜು 4 ಲಕ್ಷ ರೂಪಾಯಿ ಮೌಲ್ಯವಿದೆ ಎಂದು ತಿಳಿದುಬಂದಿದೆ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

- Advertisement -

Related news

error: Content is protected !!