Tuesday, May 7, 2024
spot_imgspot_img
spot_imgspot_img

ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾಗೆ ಪೈರಸಿಯ ಹೊಡೆತ.!

- Advertisement -G L Acharya panikkar
- Advertisement -

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಚಿತ್ರ ನವೆಂಬರ್ 5ರಂದು (ನಿನ್ನೆ) ಬಿಡುಗಡೆಯಾಗಿದೆ. ಆದರೆ, ದುರಾದೃಷ್ಟ ಎಂದರೆ ಸಿನಿಮಾ ರಿಲೀಸ್ ಆದ ಮೊದಲನೇ ದಿನವೇ ಲೀಕ್ ಆಗಿದೆ.

ಅಕ್ಷಯ್ ಕುಮಾರ್ ಸಿನಿಮಾ ‘ಸೂರ್ಯವಂಶಿ’ ಪೈರಸಿಯ ಹೊಡೆತಕ್ಕೆ ಸಿಲುಕಿದ್ದು, ಟೆಲಿಗ್ರಾಮ್ ಹಾಗೂ ತಮಿಳ್ ರಾಕರ್ಸ್ ಸೈಟ್ ನಲ್ಲಿ ಈ ಸಿನಿಮಾದ ಹೆಚ್ ಡಿ ಪ್ರಿಂಟ್ ಹರಿದಾಡುತ್ತಿದೆ ಎನ್ನಲಾಗಿದೆ.

‘ಸೂರ್ಯವಂಶಿ’ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕನಾಗಿದ್ದು, ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರ ತಂಡ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ನವೆ0ಬರ್ 4 ರಂದು ಬಿಡುಗಡೆಯಾದ ರಜನಿಕಾಂತ್ ನಟನೆಯ ಅಣ್ಣಾಥೆ ಹಾಗೂ ಒಟಿಟಿಯಲ್ಲಿ ರಿಲೀಸ್ ಆದ ಸೂರ್ಯ ಅಭಿನಯದ “ಜೈ ಭೀಮ್’ ಕೂಡ ಪೈರಸಿ ಹೊಡೆತಕ್ಕೆ ಸಿಲುಕಿದೆ.

‘ಸೂರ್ಯವಂಶಿ’ ಸಿನಿಮಾ ಪೈರಸಿಯ ಹೊಡೆತಕ್ಕೆ ಸಿಕ್ಕಿದ್ದರೂ, ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಆದರೆ, ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗಿದ್ದು ಚಿತ್ರದ ಕಲೆಕ್ಷನ್ ಗೆ ಹೊಡೆತ ಕೊಡುವ ಸಾಧ್ಯತೆ ಇದೆ.

- Advertisement -

Related news

error: Content is protected !!