Friday, March 29, 2024
spot_imgspot_img
spot_imgspot_img

ಅಕ್ಷಯ್‌ ರೈ ದಂಬೆಕಾನ ನಿರ್ಮಾಣದ “ಅಮೃತ ಸಂಜೀವಿನಿ”ಗೆ ಪ್ರಶಸ್ತಿ

- Advertisement -G L Acharya panikkar
- Advertisement -

ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಗ್ಲೋಬಲ್‌ ಬೆಂಗಳೂರು ಇಂಟರ್‌ ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್ ಅನ್ನು ಮನೋಮಯ್ ಮಲ್ಟಿಮೀಡಿಯ ವತಿಯಿಂದ ಬೆಂಗಳೂರಿನ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ವರ್ಣರಂಜಿತವಾಗಿ ತುಂಬಾ ಅದ್ದೂರಿಯಾಗಿ ಶ್ರೀ ವೈಭವ ಕೇಸ್ಕರ್ ಅವರ ನೇತೃತ್ವದಲ್ಲಿ ನಡೆಯಿತು. ಅಂತಾರಾಷ್ಟ್ರೀಯ ಫೀಲ್ಮ್‌ ಫೆಸ್ಟಿವಲ್‌ನಲ್ಲಿ ಅಕ್ಷಯಾ ರೈ ದಂಬೆಕಾನ ನಿರ್ಮಾಣದ “ಅಮೃತ ಸಂಜೀವಿನಿ”ಗೆ ಪ್ರಶಸ್ತಿ ಲಭಿಸಿದೆ.

ಈ ಚಲನಚಿತ್ರೋತ್ಸವದಲ್ಲಿ ಭಾರತದ ಹಲವು ರಾಜ್ಯಗಳು ಸೇರಿದಂತೆ ಒಟ್ಟು 39 ದೇಶಗಳ 689 ಚಲನಚಿತ್ರಗಳು ಭಾಗವಹಿಸಿದ್ದವು.
ಅದರಲ್ಲಿ 42 ಚಲನಚಿತ್ರ ,103 ಕಿರು ಚಿತ್ರ ಹಾಗೂ 33 LGBTQ ಚಿತ್ರ ಸೇರಿದಂತೆ ಅನೇಕ ಸಮಾಜಮುಖಿ ಮತ್ತು ಸದಾಭಿರುಚಿಯ ಚಿತ್ರಗಳು ಭಾಗವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ಉದ್ಘಾಟನಾ ಸಮಾರಂಭವನ್ನು ಬೆಂಗಳೂರಿನ ಡಿಐಜಿಪಿ ರವಿಕಾಂತೇಗೌಡ ಅವರು ನೆರವೇರಿಸಿದರು. ಜೊತೆಗೆ ಭಾರತೀಯ ವಾಯು ಸೇನೆಯ ಮಾಜಿ ಅಧಿಕಾರಿಗಳು ಗ್ರೂಪ್ ಕಾಪ್ಟನ್ ಆನಂದ್ ಪೊಳ ನಾಯ್ಡು ಮತ್ತು ಹಿರಿಯ ಹೃದಯ ತಜ್ಞರು ಆನಂದ್‌ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದರು.

ಮೊದಲ ದಿನ ತೀರ್ಪುಗಾರರಿಂದ ಮೊದಲ ಸುತ್ತಿನಲ್ಲಿ ಆಯ್ಕೆಯಾದ ಒಟ್ಟು 14 ಚಿತ್ರಗಳು ಹಾಗೂ ಎರಡನೇ ದಿನ 8 ಚಿತ್ರಗಳು ಪ್ರದರ್ಶನ ಪಟ್ಟು ಜನರ ಮನಸ್ಸನ್ನು ಗೆದ್ದವು. ಚಿತ್ರರಂಗದ ವಿವಿಧ ವಿಭಾಗದಲ್ಲಿ ತೀರ್ಪುಗಾರರಿಂದ ಪ್ರಶಂಸೆಗೆ ಒಳಗಾಗಿ ಪ್ರೇಕ್ಷಕರ ಮನ ಗೆದ್ದ ಸುಮಾರು 9 ಚಲನಚಿತ್ರ ಗಳು ಹಾಗೂ 27 ಕಿರು ಚಿತ್ರಗಳಿಗೆ ವಿವಿಧ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಲವಾರು ಭಾಷೆಗಳ ಚಲನಚಿತ್ರ ನಟರು, ನಿರ್ಮಾಪಕ ಹಾಗೂ ನಿರ್ದೇಶಕರು ಭಾಗವಹಿಸಿ ತಮ್ಮ ಚಿತ್ರಗಳ ವಿಮರ್ಶೆ ಹಾಗೂ ಪ್ರೇಕ್ಷಕರ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿದರು.

ಈ ಚಲನಚಿತ್ರ ಉತ್ಸವ ಭಾರತೀಯ ಚಿತ್ರರಂಗಕ್ಕೆ ಹೊಸದಾಗಿ ಕಾಲಿಡುತ್ತಿರುವ ಹಲವಾರು ಯುವ ಹಾಗೂ ಹಿರಿಯ ಕಲಾವಿದರನ್ನು ಬೆಂಬಲಿಸುತ್ತ ಅನೇಕ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ಚಲನಚಿತ್ರ ವಿಭಾಗದಲ್ಲಿ ತಮಿಳು ಚಿತ್ರ Do over ಬೇಸ್ಟ್ ಫಿಲ್ಮ್ ಅವಾರ್ಡ್ ಪಡೆಯಿತು. ಕನ್ನಡದ ಗುರು ಶಿಷ್ಯರು ಚಿತ್ರಕ್ಕೆ ಉತ್ತಮ ನಿರ್ದೇಶಕ ಹಾಗೂ ಉತ್ತಮ ನಾಯಕ ಸೇರಿದಂತೆ 4 ಪ್ರಶಸ್ತಿಗಳನ್ನ ಬಾಚಿಕೊಂಡಿತು. ಅದಲ್ಲದೆ ಹಿರಿಯ ನಟಿ ರೇಖದಾಸ್ ರವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು. ಅದೇ ರೀತಿ ಕಿರು ಚಿತ್ರ ವಿಭಾಗದಲ್ಲಿ ಯುವ ನಿರ್ದೇಶಕರ ಮತ್ತು ನಟರ ಚಿತ್ರಗಳಾದ ಪೀಠಿಲು ಚೌಡಯ್ಯ, ಒಂದು ಕಾಡಿನ ಮಧ್ಯದೊಳಗೆ , ಲೀಸಾ, ಮತ್ತು love ಅಂಜಲಿ ಚಿತ್ರಗಳು ಪ್ರಶಸ್ತಿಗಳನ್ನ ಬಾಚಿಕೊಂಡವು.

ಎರಡನೇ ದಿನದ ಅದ್ದೂರಿ ಸಮಾರೋಪ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬೆಂಗಳೂರು ಮಹಾ ನಗರ ಪಾಲಿಗೆಯ ಮಾಜಿ ಮೇಯರ್ ಎಮ್‌. ಗೌತಮ್ ಕುಮಾರ್ ಹಾಗೂ ಯಮುನಾ ಶ್ರೀನಿಧಿ ಅವರು ಪಾಲ್ಗೊಂಡು ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಸಮಾರಂಭವನ್ನು ಯಶಸ್ವಿಗೊಳಿಸಿದ ಎಲ್ಲ ಪ್ರೇಕ್ಷಕರಿಗೆ ದೇಶದ ವಿವಿಧ ರಾಜ್ಯಗಳಿಂದ ಬಂದ ನಿರ್ಮಾಪಕ, ನಿರ್ದೇಶಕ ಹಾಗೂ ನಟರಿಗೆ ಮತ್ತು ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ಮನೋಮಯಿ ವತಿಯಿಂದ ಚಲನಚಿತ್ರೋತ್ಸವದ ರೂವಾರಿ ಆಗಿರುವ ವೈಭವ ಕೇಸ್ಕರ್ ಅವರು ಧನ್ಯವಾದಗಳನ್ನ ತಿಳಿಸಿದ್ದಾರೆ.

- Advertisement -

Related news

error: Content is protected !!