Friday, March 29, 2024
spot_imgspot_img
spot_imgspot_img

ಅಜ್ಜಿಯನ್ನು ನೋಡಲು ಹೋದ ಕಂದಮ್ಮ 5ನೇ ಮಹಡಿಯಿಂದ ಬಿದ್ದು ಸಾವು!!

- Advertisement -G L Acharya panikkar
- Advertisement -

ಬೆಂಗಳೂರು: ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು 2 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜಧಾನಿಯ ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ಇನ್‍ವೆಸ್ಟ್​ಮೆಂಟ್​​ ಲೇಔಟ್‍ನಲ್ಲಿ ಸಂಭವಿಸಿದೆ. ಮೃತ ಬಾಲಕ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ದಿವ್ಯಾಂಶ್ ರೆಡ್ಡಿ (2) ಎನ್ನಲಾಗಿದೆ.

vtv vitla
vtv vitla

ದಿವ್ಯಾಂಶ್ ರೆಡ್ಡಿ ತಂದೆ ತರಕಾರಿ ವ್ಯಾಪಾರಿಯಾಗಿದ್ದು, ತಾಯಿ ಮನೆ ಕೆಲಸ ಮಾಡಿಕೊಂಡಿದ್ದಾರೆ. ಬಾಲಕನ ಅಜ್ಜಿ ಕೆಲ ದಿನಗಳಿಂದ ನಗರದಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದರು. ಆಗ ನೀಲಾದ್ರಿ ಇನ್‍ವೆಸ್ಟ್​​ಮೆಂಟ್​​ ಲೇಔಟ್‍ನ ಅಪಾರ್ಟ್‍ಮೆಂಟ್‍ವೊಂದರಲ್ಲಿ ಮನೆ ಬಾಡಿಗೆಗಿರುವುದು ಗಮನಕ್ಕೆ ಬಂದಿತ್ತು. ಶುಕ್ರವಾರ ಸಂಜೆ ಮೊಮ್ಮಗ ದಿವ್ಯಾಂಶ ರೆಡ್ಡಿಯನ್ನು ಕರೆದುಕೊಂಡು ಮನೆ ನೋಡಲು ಹೋಗಿದ್ದರು.

vtv vitla
vtv vitla

ಅಪಾರ್ಟ್‍ಮೆಂಟ್‍ನ 5ನೇ ಮಹಡಿಯಲ್ಲಿ ಅಜ್ಜಿ ಮನೆ ನೋಡುತ್ತಿದ್ದರೆ, ದಿವ್ಯಾಂಶ್ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ. ಆ ವೇಳೆ ಬಾಲ್ಕನಿಯ ಸಮೀಪದ ಪ್ಲಾಸ್ಟಿಕ್ ಶೀಟ್ ಮೇಲೆ ಕಾಲಿಟ್ಟು ಪಕ್ಕದಲ್ಲಿದ್ದ ಹೋಲ್‍ ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ದಿವ್ಯಾಂಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದಿದ್ದಾರೆ. ಶುಕ್ರವಾರ ರಾತ್ರಿಯೇ ಎಲೆ ಕ್ಟ್ರಾನಿಕ್ ಸಿಟಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಸ್ಥಳದಲ್ಲಿದ್ದವರ ಹೇಳಿಕೆ ಪಡೆದಿದ್ದಾರೆ. ಈ ಕುರಿತು ತನಿಖೆ ನಡೆಸಲಾ ಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!