Thursday, May 9, 2024
spot_imgspot_img
spot_imgspot_img

ಅಟ್ಟಹಾಸ ಮೆರೆದ ನಕ್ಸಲರು: ಮೂವರು CRPF ಯೋಧರು ಹುತಾತ್ಮ

- Advertisement -G L Acharya panikkar
- Advertisement -

ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು CRPF ಯೋಧರು ಹುತಾತ್ಮರಾದ ಘಟನೆ ನಡೆದಿದೆ. ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯ ಜಗರಗುಂದ ಮತ್ತು ಕುಂಡೆಡ್ ಗ್ರಾಮದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಗುಂಡಿನ ಚಕಮಕಿಯಲ್ಲಿ ಸಹಾಯಕ ಸಬ್ ಇನ್ಸ್​ಪೆಕ್ಟರ್ ಸೇರಿದಂತೆ ಮೂವರು ಪೊಲೀಸರ್ ಹುತಾತ್ಮರಾಗಿದ್ದಾರೆ ಎಂದು CRPF ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ನಡೆದ ಎನ್ಕೌಂಟರ್​ನಲ್ಲಿ ಡಿಆರ್​ಜಿ ಸಹಾಯಕ ಸಬ್ ಇನ್ಸ್​ಪೆಕ್ಟರ್ ರಾಮುರಾಮ್ ನಾಗ್, ಸಹಾಯಕ ಕಾನ್ಸ್‌ಟೇಬಲ್ ಕುಂಜ್ರಾಮ್ಜೋಗ ಮತ್ತು ಕಾನ್ಸ್‌ಟೇಬಲ್ ವಂಜಮ್ ಭೀಮ ಹುತಾತ್ಮರಾಗಿದ್ದಾರೆ.

ಈ ಎನ್ಕೌಂಟರ್​​ನಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು , ಇಬ್ಬ ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಜಾಗರಗುಂದ ಪೊಲೀಸ್ ಠಾಣೆಯಿಂದ ಡಿಆರ್​ಜಿ ತಂಡವನ್ನು ಗಸ್ತು ತಿರುಗಲು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!