- Advertisement -
- Advertisement -



ಬೆಂಗಳೂರು: ಅನಾಥ ಮಕ್ಕಳ ಆಶ್ರಮಗಳಲ್ಲಿ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬ್ರೇಕ್ ಹಾಕಿದೆ. ಸೆಲೆಬ್ರೆಟಿಗಳು, ರಾಜಕಾರಣಿಗಳಿಂದ ಹೊಸ ಟ್ರೆಂಡ್ ಶುರುವಾಗಿತ್ತು. ತಮ್ಮ ತಮ್ಮ ಹುಟ್ಟುಹಬ್ಬವನ್ನು ಅನಾಥ ಮಕ್ಕಳ ಜೊತೆ ಸೇರಿ ಆಚರಿಸುತ್ತಿದ್ದರು. ಆದರೆ ಈ ಪದ್ಧತಿಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬ್ರೇಕ್ ಹಾಕಿದೆ.

ಸೆಲೆಬ್ರಿಟಿಗಳು, ರಾಜಕಾರಣಿಗಳಿಂದ ಅದ್ಧೂರಿ ಬರ್ತ್‌ಡೇಯಿಂದ ಅನಾಥ ಮಕ್ಕಳ ಮನಸಿನಲ್ಲಿ ಅಸಮಾನತೆ ಮೂಡುತ್ತದೆ. ಮಕ್ಕಳ ಮನಸಿನಲ್ಲಿ ತಾವು ಕೀಳೆಂಬ ಭಾವನೆ ಬರಬಹುದು. ತಾರತಮ್ಯ ಭಾವನೆ ಹೆಚ್ಚಾಗಿ ಖಿನ್ನತೆಗೆ ಕಾರಣವಾಗಬಹುದು. ಹೀಗಾಗಿ ಆಶ್ರಮಗಳಲ್ಲಿ ಅದ್ಧೂರಿ ಬರ್ತ್‌ಡೇ ಆಚರಣೆಗೆ ನಿರ್ಬಂಧ ಹೇರಲಾಗಿದೆ.
ಇನ್ನು ಮುಂದೆ ಹೊರಗಿನಿಂದ ಬಂದು ಹುಟ್ಟುಹಬ್ಬವನ್ನು ಆಚರಿಸುವಂತಿಲ್ಲ. ಅದ್ಧೂರಿ ಹುಟ್ಟುಹಬ್ಬ ಆಚರಿಸಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಹೀಗಾಗಿ ಮಕ್ಕಳ ರಕ್ಷಣಾ ನಿರ್ದೇಶನಾಯ ಈ ನಿರ್ಧಾರ ತೆಗೆದುಕೊಂಡಿದೆ.


- Advertisement -








