Saturday, April 27, 2024
spot_imgspot_img
spot_imgspot_img

ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾದ ಮಲೆಯಾಳಂ ನಟ

- Advertisement -G L Acharya panikkar
- Advertisement -

ಮಲೆಯಾಳಂನ ಖ್ಯಾತ ಪೋಷಕ ನಟ ನಿರ್ದೇಶಕ ಪ್ರತಾಪ್ ಪೋಥೆನ್ ಚೆನ್ನೈ ನ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

69 ವರ್ಷದ ನಟ ಸುಮಾರು 12 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಎಂದಿನಂತೆ ಮನೆ ಕೆಲಸ ಮಾಡಲು ಕೆಲಸದವರು ಬಂದಾಗ ಪ್ರತಾಪ್ ಪೋಥೆನ್ ಮೃತ ದೇಹವನ್ನು ಬೆಡ್‌ರೂಮ್‌ನಲ್ಲಿ ನೋಡಿ ಶಾಕ್ ಆಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದ ಪ್ರತಾಪ್ ಅವರು ಕಳೆದ 16 ಗಂಟೆಯ ಹಿಂದೆ ಸಾಲು ಸಾಲು ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲದೆ ಸಾವಿನ ಬಗ್ಗೆಯೂ ಮಾತನಾಡಿದ್ದರು. ಜಾರ್ಜ್ ಕಾರ್ಲಿನ್ ಅವರ ‘ದೀರ್ಘಾವಧಿಯಲ್ಲಿ ಸಣ್ಣ ಪ್ರಮಾಣದ ಲಾಲಾರಸವನ್ನು ನುಂಗುವುದರಿಂದ ಸಾವು ಸಂಭವಿಸುತ್ತದೆ’ ಎಂಬ ವ್ಯಾಖ್ಯಾನವನ್ನು ಪ್ರತಾಪ್ ಶೇರ್ ಮಾಡಿದ್ದರು. ಅವರು ಸಾಲು ಸಾಲು ಪೋಸ್ಟ್ ನೋಡಿದರೆ ಮನಸ್ಸಿನಲ್ಲಿ ಏನೋ ದುಗುಡವಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎನ್ನಲಾಗಿದೆ.

100ಕ್ಕೂ ಹೆಚ್ಚು ಮಲಯಾಳಂ, ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಪ್ರತಾಪ್ ಪೋಥೆನ್ ಅಭಿನಯಿಸಿದ್ದಾರೆ. 1979ರಲ್ಲಿ ಆರವ್‌ ಸಿನಿಮಾ ಮೂಲಕ ಪ್ರತಾಪ್ ಪೋಥೆನ್ ಅವರನ್ನು ಭರತ್ ಚಿತ್ರರಂಗಕ್ಕೆ ಕರೆ ತಂದರು. 1980ರಲ್ಲಿ ಲೋರಿ ಮತ್ತು ಚಮರಮ್ ಸಿನಿಮಾದಲ್ಲಿ ಪ್ರತಾಪ್ ಹೆಚ್ಚಿನ ಗಮನ ಸೆಳೆದ್ದರು.

- Advertisement -

Related news

error: Content is protected !!