

ಶಿವಮೊಗ್ಗ: ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಯುವಕ ದೂರು ವಾಪಸ್ ಪಡೆಯುವಂತೆ ಧಮ್ಕಿ ಹಾಕುತ್ತಿರುವ ಘಟನೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಗ್ರಾಮವೊಂದರಲ್ಲಿ ಅಪ್ರಾಪ್ತೆ ಮೇಲೆ ಅದೇ ಗ್ರಾಮದ ಯುವಕ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ದಾಖಲಾಗಿತ್ತು.
ಅತ್ಯಾಚಾರ ನಡೆದ ಬಳಿಕ ಯುವಕ ಈ ವಿಚಾರವನ್ನು ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಸಿದ್ದಾನೆ. ಆದರೆ ಅಪ್ರಾಪ್ತೆಯು ತನ್ನ ಅಜ್ಜಿಯ ಬಳಿ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಈ ಕುರಿತು ಆಕೆಯ ಪೋಷಕರು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಬಾಲಕಿ ಮಹಿಳಾ ಮತ್ತು ಮಕ್ಕಳ ಘಟಕದಲ್ಲಿ 10 ದಿನಗಳ ಕಾಲ ರಕ್ಷಣೆಯಲ್ಲಿದ್ದಳು. ಬಳಿಕ ಬಾಲಕಿಯನ್ನು ಪೋಷಕರು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದರು.
ಇತ್ತ ದೂರು ದಾಖಲಾಗುತ್ತಿದ್ದಂತೆ ಅತ್ಯಾಚಾರ ಎಸಗಿದ ಆರೋಪಿ ತನ್ನ ತಂದೆಯ ಜೊತೆ ಆಫ್ರಿಕಾದ ಕ್ಯಾಮರೂನ್ಗೆ ಹಾರಿದ್ದಾನೆ. ಈಗ ಅಲ್ಲಿಂದಲೇ ಬಾಲಕಿಗೆ ವಾಟ್ಸ್ ಆಫ್ ಕರೆ ಮೂಲಕ ದೂರು ವಾಪಸ್ ಪಡೆಯುವಂತೆ ಧಮ್ಕಿ ಹಾಕುತ್ತಿದ್ದಾನಂತೆ.
ಆದರೆ ದೂರು ದಾಖಲಾದರೂ ಸಹ ಅತ್ಯಾಚಾರ ಪ್ರಕರಣದ ಆರೋಪಿ ವಿದೇಶಕ್ಕೆ ತೆರಳಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ ಈಗ ಧಮ್ಕಿ ಹಾಕಿದ ಕುರಿತು ಪೊಲೀಸರಿಗೆ ತಿಳಿಸಿದರೆ, ಮತ್ತೆ ದೂರು ನೀಡಿ ಎಂದು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನೊಂದ ಕುಟುಂಬದವರು ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.
- ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋದವನೇ ಅಲ್ಲ-ನನ್ನ ಹೋರಾಟ ಧರ್ಮಸ್ಥಳ ನ್ಯಾಯಕ್ಕಾಗಿ, ಹಣಕ್ಕಾಗಿ ಅಲ್ಲ :ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ ನಟ ಪ್ರಕಾಶ್ ರಾಜ್
- ವಿಟ್ಲ: ಕಳ್ಳತನ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಡಾಲರ್ ಸಲಾಂ ಬಂಧನ
- ಲೋಕಾಯುಕ್ತ ದಾಳಿಯ ವೇಳೆ ನಿವೃತ್ತ ಎಂಜಿನಿಯರ್ ಲಾಕರ್ನಲ್ಲಿ 9 ಲಕ್ಷ ರೂ. ಹಳೆಯ ನೋಟು, 20 ತೊಲೆಗೂ ಹೆಚ್ಚು ಚಿನ್ನ ಪತ್ತೆ
- ವಿಟ್ಲ: ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಮಂಡಲ ಹವನ
- ಪೆರುವಾಯಿ–ಪೇರಡ್ಕ ಅಪಾಯಕಾರಿ ಸೇತುವೆ ನೂತನ ನಿರ್ಮಾಣಕ್ಕೆ ಆಗ್ರಹ: ಜೂನ್ 22ಕ್ಕೆ ರಸ್ತೆ ತಡೆ ಪ್ರತಿಭಟನೆ ಎಚ್ಚರಿಕೆ!










