Thursday, June 25, 2026
spot_imgspot_img
spot_imgspot_img

ಅಮರನಾಥ ಯಾತ್ರಾ ಮಾರ್ಗ ಬಳಿ ಎನ್ಕೌಂಟರ್-ಮೂವರು ಉಗ್ರರು ಹತ್ಯೆ

- Advertisement -
- Advertisement -

ಶ್ರೀನಗರ: ಅಮರನಾಥ ಯಾತ್ರೆಯ ಮಾರ್ಗದ ಬಳಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಶುಕ್ರವಾರ ಹೊಡೆದುರುಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ವಾರ್ಷಿಕ ಅಮರನಾಥ ಯಾತ್ರೆಯ ಮಾರ್ಗದ ಬಳಿ ಈ ಎನ್ಕೌಂಟರ್‍ ನಡೆದಿತ್ತು. ಅನಂತನಾಗ್‌ನ ಪಹಲ್ಗಾಮ್‌ನಲ್ಲಿರುವ ಶ್ರೀಚಂದ್ ಟಾಪ್ ಅರಣ್ಯ ಪ್ರದೇಶದಲ್ಲಿ ಭಯೋಪತ್ಪಾದಕರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಭದ್ರತಾ ಪಡೆಗಳು ಆಗಮಿಸುವುದನ್ನು ಕಂಡು ಅಡಗಿದ್ದ ಭಯೋತ್ಪಾದಕರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದರು. ತತ್‌ಕ್ಷಣ ಪ್ರತಿದಾಳಿ ನಡೆಸಿದ ಭದ್ರತಾ ಪಡೆಯ ಸೈನಿಕರು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಭಯೋತ್ಪಾದಕರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರು ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಹತ್ಯೆಗೀಡಾದ ಉಗ್ರರ ಪೈಕಿ ಓರ್ವ ಹಳೆಯ ಭಯೋತ್ಪಾದಕ ಅಶ್ರಫ್ ಮೋಲ್ವಿ ಎಂಬುದಾಗಿ ಕಾಶ್ಮೀರದ ಇನ್ಸ್‌ಪೆಕ್ಟರ್-ಜನರಲ್ ಆಫ್ ಪೋಲೀಸ್ (ಐಜಿಪಿ) ವಿಜಯ್ ಕುಮಾರ್ ಗುರುತಿಸಿದ್ದಾರೆ. ಯಾತ್ರಾ ಮಾರ್ಗದಲ್ಲಿ ಭಯೋತ್ಪಾದಕರ ಹತ್ಯೆಯಾಗಿರುವುದು ನಮಗೆ ಸಿಕ್ಕಿದ ಅತ್ಯಂತ ದೊಡ್ಡ ಯಶಸ್ಸಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

Related news

error: Content is protected !!