Thursday, June 25, 2026
spot_imgspot_img
spot_imgspot_img

ಅಮೆರಿಕನ್ ಶಾಲೆ ಮೇಲೆ ದಾಳಿಗೆ ಸಂಚು; ಕಂಪ್ಯೂಟರ್ ಎಂಜಿನಿಯರ್‌ಗೆ ಜೀವಾವಧಿ ಶಿಕ್ಷೆ

- Advertisement -
- Advertisement -

ಮುಂಬೈ: ಮುಂಬೈನ ಶಾಲೆಯೊಂದರ ಮಕ್ಕಳ ಮೇಲೆ ದಾಳಿಗೆ ಸಂಚು ರೂಪಸಿದ್ದ ಆರೋಪದ ಮೇಲೆ ಕಂಪ್ಯೂಟರ್ ಎಂಜಿನಿಯರ್‌ ಅನೀಸ್ ಅನ್ಸಾರಿಗೆ ಮುಂಬೈ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮುಂಬೈನ ಅಮೆರಿಕದ ಶಾಲೆಯಲ್ಲಿ ಮಕ್ಕಳ ಮೇಲೆ ದಾಳಿಗೆ ಸಂಚು ರೂಪಿಸಿದ ಆರೋಪದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ 2014ರ ಅಕ್ಟೋಬರ್‌ನಲ್ಲಿ ಅನ್ಸಾರಿಯನ್ನು ಬಂಧಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆತನಿಗೆ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ. ಎ. ಜೋಗ್ಲೇಕರ್ ಅವರು ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ತೀರ್ಪು ಪ್ರಕಟಿಸಿದರು. ಖಾಸಗಿ ಕಂಪೆನಿಯೊಂದರಲ್ಲಿ ಸಹಾಯಕ ಭೌಗೋಳಿಕ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ ಅನ್ಸಾರಿ, ಸಂಸ್ಥೆಯ ಕಂಪ್ಯೂಟರ್ ಬಳಸಿಕೊಂಡು ನಕಲಿ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು, ಆಕ್ಷೇಪಾರ್ಹ ಮಾಹಿತಿಯನ್ನು ಪ್ರಕಟಿಸಿದ್ದ ಎಂದು ಪ್ರಾಸಿಕ್ಯೂಶನ್ ತಿಳಿಸಿದ್ದಾರೆ.

ಈತ ಐಸಿಸ್ ಚಟುವಟಿಕಗಳಿಗೆ ಬೆಂಬಲ ನೀಡುತ್ತಿದ್ದ ಎಂದು ತನಿಖಾ ಸಂಸ್ಥೆ ಆರೋಪಿಸಿತ್ತು. ಅಲ್ಲದೆ ಒಮರ್ ಎಲ್ಹಾಜಿಯೊಂದಿಗೆ ಈತ ನಡೆಸಿದ ಚಾಟ್‌ಗಳನ್ನು ಪರಿಶೀಲಿಸಿದರೆ, ಇಬ್ಬರೂ ಅಮೆರಿಕನ್ ಶಾಲೆ ಮೇಲೆ ದಾಳಿಗೆ ಸಂಚು ರೂಪಿಸಿದ್ದರು ಎಂಬುದು ಸಾಬೀತಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!