Thursday, July 30, 2026
spot_imgspot_img
spot_imgspot_img

ಅಮೆರಿಕಾದಲ್ಲಿ ಗುಂಡೇಟಿಗೆ ಭಾರತೀಯ ಯುವಕ ಸಾವು

- Advertisement -
- Advertisement -

ಮೇರಿಲ್ಯಾಂಡ್: ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವಾಹನದಲ್ಲಿ ತಲೆಗೆ ಗುಂಡೇಟು ತಗುಲಿ ಗಂಭೀರ ಗಾಯಗೊಂಡಿದ್ದ ಭಾರತೀಯ ಮೂಲದ ಯುವಕನೊಬ್ಬ ಅಸುನೀಗಿದ್ದಾನೆ.

ಮೃತ ಯುವಕನನ್ನು ಸಾಯಿ ಚರಣ್ ನಕ್ಕಾ (25) ಎಂದು ಗುರುತಿಸಲಾಗಿದೆ. ಈತ ವ್ಯಕ್ತಿ ಸಿಲ್ವರ್ ಹುಂಡೈ ಟಕ್ಸನ್ ಎಸ್‌ಯುವಿಯೊಳಗೆ ಗುಂಡೇಟಿನಿಂದ ಗಾಯಗೊಂಡಿದ್ದ. ವಿಚಾರ ತಿಳಿದ ತತ್‌ಕ್ಷಣ ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರದ ಪೊಲೀಸರು ಸ್ಥಳಕ್ಕಾಗಮಿಸಿ ತತ್‌ಕ್ಷಣ ಅವರನ್ನು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಆರ್. ಆಡಮ್ಸ್ ಕೌಲಿ ಶಾಕ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಬಾಲ್ಟಿಮೋರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

- Advertisement -

Related news

error: Content is protected !!