Friday, May 3, 2024
spot_imgspot_img
spot_imgspot_img

ಅಮೇರಿಕದಲ್ಲಿ ಎಂಟು ತಿಂಗಳ ಮಗು ಸೇರಿ ಭಾರತೀಯ ಮೂಲದ ನಾಲ್ವರ ಅಪಹರಣ

- Advertisement -G L Acharya panikkar
- Advertisement -

ಕ್ಯಾಲಿಪೋರ್ನಿಯಾ: 8 ತಿಂಗಳ ಮಗು ಸೇರಿ ನಾಲ್ವರು ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳನ್ನು ಕ್ಯಾಲಿಪೋರ್ನಿಯಾದಲ್ಲಿ ಆಪಹರಿಸಲಾಗಿದೆ. ನಗರದ ಮರ್ಸೀಡ್ ಕೌಂಟಿ ಪ್ರದೇಶದಲ್ಲಿ ನಾಲ್ವರಿದ್ದ ಭಾರತೀಯ ಕುಟುಂಬವನ್ನು ಅಪಹರಿಸಲಾಗಿದೆ. ಹಣಕ್ಕಾಗಿಯೇ ಅಪಹರಣ ನಡೆರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

35 ವರ್ಷದ ಜಸ್‌ದೀಪ್‌ ಸಿಂಗ್, ಅವರ ಪತ್ನಿ 27 ವರ್ಷದ ಜಸ್‌ಲೀನ್‌ ಕೌರ್‌ ಹಾಗೂ ದಂಪತಿಯ 8 ತಿಂಗಳ ಮಗು ಮತ್ತು ಮಗುವಿನ ಮಾವ 39 ವರ್ಷದ ಅಮನ್‌ ದೀಪ್‌ ಸಿಂಗ್ ಅಪಹರಣಕ್ಕೆ ಒಳಗಾದವರು.

ಅಪಹರಣಕಾರರು ಶಸ್ತ್ರಧಾರಿಗಳಾಗಿದ್ದರು ಎಂದು ತಿಳಿದು ಬಂದಿದ್ದು, ಅವರ ವರ್ತನೆಯಿಂದ ಸಂಘಟಿತ ಅಪರಾಧ ಗುಂಪಿಗೆ ಸೇರಿದವರು ಎಂಬ ಅನುಮಾನವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣಕಾರದ ಜಾಡು ಹಿಡಿದು ಹೋಧ ಕಾರ್ಯ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

2019ರಲ್ಲಿ ಕ್ಯಾಲಿಫೊರ್ನಿಯಾದಲ್ಲಿ ನೆಲೆಸಿದ್ದ ತುಷಾರ್ ಆತ್ರೆ ಎಂಬ ಭಾರತೀಯ ಮೂಲದ ಅಮೇರಿಕನ್ ಪ್ರಜೆಯನ್ನು ಅಪಹರಿಸಲಾಗಿತ್ತು. ಆದರೆ ಅಪಹರಣಗೊಂಡ ಕೆಲವೇ ಗಂಟೆಗಳಲ್ಲಿ ತುಷಾರ್ ಆತ್ರೆ ಶವ ಅವರ ಗೆಳತಿಯ ಕಾರಿನಲ್ಲಿ ಸಿಕ್ಕಿತ್ತು.

ಇದೀಗ ಒಂದೇ ಕುಟುಂಬದ ನಾಲ್ವರು ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳನ್ನು ಅಪಹರಿಸಲಾಗಿದ್ದು, ಆತಂಕ ಮನೆ ಮಾಡಿದೆ. ಸದ್ಯ ಅಪಹರಣಕ್ಕೀಡಾಗಿರುವವರ ಭಾವಚಿತ್ರಗಳನ್ನು ಬಿಡುಗಡೆ ಮಾಡಿರುವ ಪೊಲೀಸರು ಇವರ ಬಗ್ಗೆ ಯಾವುದೇ ಮಾಹಿತಿ ಇದ್ದರೂ, ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!