Thursday, April 25, 2024
spot_imgspot_img
spot_imgspot_img

ಅಲೋವೆರಾ ಜ್ಯೂಸ್ ಸೇವಿಸುವುದರಿಂದಾಗುವ ಪ್ರಯೋಜನಗಳು ಏನು ಗೊತ್ತಾ?

- Advertisement -G L Acharya panikkar
- Advertisement -

ಅಲೋವೆರಾ ಜ್ಯೂಸ್‌ನಲ್ಲಿ ಹಲವಾರು ಆರೋಗ್ಯ ಲಾಭಗಳನ್ನು ನಾವು ಪಡೆದುಕೊಳ್ಳಬಹುದು. ಈ ಲೇಖನದಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಉಂಟಾಗುವ ಆರೋಗ್ಯ ಲಾಭಗಳನ್ನು ತಿಳಿಸಲಾಗಿದೆ.

ಅಲೋವೆರಾವನ್ನು ಬಳಸುವುದರಿಂದ ಮತ್ತು ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಂಡರೆ ಪ್ರತಿಯೊಬ್ಬರೂ ಇದನ್ನು ಸೇವಿಸುತ್ತಾರೆ. ಅಲೋವೆರಾ ಸೌಂದರ್ಯವರ್ಧಕವು ಹೌದು ಆರೋಗ್ಯಕ್ಕೂ ಉತ್ತಮವಾಗಿದೆ. ಇತ್ತೀಚಿನ ದಿನಗಳಲ್ಲಿ ಅಲೋವೆರಾ ಸಸ್ಯವನ್ನು ಪ್ರತಿಯೊಬ್ಬರ ಮನೆ ಅಂಗಳದಲ್ಲಿ ನಾವು ನೋಡುತ್ತೇವೆ. ಅಲೋವೆರಾವನ್ನು ಸೌಂದರ್ಯವರ್ಧಕವಾಗಿ ಜೆಲ್ ರೂಪದಲ್ಲಿ, ಆರೋಗ್ಯಕ್ಕಾಗಿ ಜ್ಯೂಸ್ ರೂಪದಲ್ಲಿ ಬಳಸಲಾಗುತ್ತದೆ. ಅಲೋವೆರಾ ಜ್ಯೂಸ್‌ನಲ್ಲಿ ಅತಿಹೆಚ್ಚಿನ ಪ್ರಮಾಣದ ನೀರಿನ ಅಂಶ ಮತ್ತು ಇತರೆ ಪೋಷಕಾಂಶಗಳಿವೆ.

ನಿಯಮಿತವಾಗಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಆಗುವ ಅನೇಕ ಆರೋಗ್ಯದ ಲಾಭಗಳ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾದಲ್ಲಿ ಪೂರ್ಣ ಲೇಖನವನ್ನು ಓದಿ. ಅಲೋವೆರಾ ಜ್ಯೂಸ್ ದಪ್ಪ ದ್ರವವಾಗಿದ್ದು ಅದು ಸಸ್ಯದ ಎಲೆಯಿಂದ ತಯಾರಿಸಲ್ಪಟ್ಟಿದೆ. ಇದು ಸಾಮಾನ್ಯವಾಗಿ ಬಿಸಿಲಿನ ಬೇಗೆಯನ್ನು ಗುಣಪಡಿಸುತ್ತದೆ ಎಂದು ತಿಳಿದುಬಂದಿದೆ. ಆದರೆ ಅಲೋವೆರಾ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅಲೋವೆರಾ ಜ್ಯೂಸ್ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಇದನ್ನು ಅಲೋವೆರಾ ಸಸ್ಯದ ಎಲೆಯನ್ನು ಪುಡಿಮಾಡಿ ತಯಾರಿಸಲಾಗುತ್ತದೆ. ಸುಲಭವಾಗಿ ಶೇಕ್ಸ್ ಮತ್ತು ಸ್ಮೂಥಿಗಳಲ್ಲಿ ಬೆರೆಸಬಹುದು.

ಅಲೋವೆರಾ ಜ್ಯೂಸ್ ನಿಂದ ಆಗುವ ಆರೋಗ್ಯದ ಲಾಭಗಳು.

​ತೇವಾಂಶವನ್ನು ಒದಗಿಸುತ್ತದೆ:

ಅಲೋವೆರಾದಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶವಿದ್ದು ಇದು ದೇಹಕ್ಕೆ ತೇವಾಂಶವನ್ನು ಒದಗಿಸುತ್ತದೆ. ಇದರಿಂದ ನಿಮ್ಮ ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ. ನಿಮ್ಮ ದೇಹದಲ್ಲಿರುವ ಹಾನಿಕಾರಕ ವಿಷಗಳನ್ನು ತೆಗೆದುಹಾಕುವ ಮೂಲಕ ನಿಮ್ಮ ದೇಹವು ಆರೋಗ್ಯಯುತವಾಗಿ ಇರುವಂತೆ ನೋಡಿಕೊಳ್ಳುತ್ತದೆ. ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ ರಕ್ತದಲ್ಲಿ ಆಮ್ಲಜನಕ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ

ಅಲೋವೆರಾ ಜ್ಯೂಸ್‌ನಲ್ಲಿ ಇರುವ ಗುಣವು ನಿಮ್ಮ ಯಕೃತ್ತಿನಲ್ಲಿ ಇರುವ ವಿಷಕಾರಿ ಅಂಶವನ್ನು ಹೊರಹಾಕುವ ಮೂಲಕ ನಿಮ್ಮ ಯಕೃತ್ತು ಆರೋಗ್ಯಯುತವಾಗಿ ಮತ್ತು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇದು ಹೈಡ್ರೇಟಿಂಗ್ ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಿಂದ ತುಂಬಿದ್ದು ಯಕೃತ್ತಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

​ಮಲಬದ್ಧತೆಯನ್ನು ನಿವಾರಿಸುತ್ತದೆ

ನೀವೂ ನಿಯಮಿತವಾಗಿ ಅಲೋವೆರಾ ಜ್ಯೂಸನ್ನು ಸೇವಿಸುವುದರಿಂದ ಇದು ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದ ಮಲಬದ್ಧತೆಯು ಮತ್ತಷ್ಟು ಸುಲಭವಾಗಿ, ಮಲಬದ್ಧತೆ ಯಾವುದೇ ಸಮಸ್ಯೆ ಇದ್ದರೂ ಪರಿಣಾಮವಾಗುತ್ತದೆ. ಇದು ಮಲವನ್ನು ಸುಲಭವಾಗಿ ರವಾನಿಸಲು ಸಹಾಯ ಮಾಡುತ್ತದೆ. ಕೆಲವು ಬಾರಿ ಮಲಬದ್ಧತೆಯು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಅಂಥವರು ಅಲೋವೆರ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು.

ಚರ್ಮಕ್ಕೆ ಉತ್ತಮವಾದದ್ದು

ಅಲೋವೆರಾದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಮತ್ತು ಆಂಟಿಆಕ್ಸಿಡೆಂಟ್ ಗಳು ಇದ್ದು ಇದು ಚರ್ಮದ ಮೇಲೆ ಇರುವಂತಹ ಕಲೆಗಳನ್ನು ನಿವಾರಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಇದು ಡರ್ಮಟೈಟಿಸ್, ಸೋರಿಯಾಸಿಸ್ ಮುಂತಾದ ಕೆಲವು ಚರ್ಮದ ಸ್ಥಿತಿಗಳನ್ನು ಸಹ ನಿವಾರಿಸುತ್ತದೆ. ಇದು ನಿಮ್ಮ ಚರ್ಮದಲ್ಲಿನ ಸೂರ್ಯನ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುವ ನೇರಳಾತೀತ ಕಿರಣಗಳ ಪರಿಣಾಮಗಳನ್ನು ತಟಸ್ಥಗೊಳಿಸುತ್ತದೆ. ಅಲೋವೆರಾದಲ್ಲಿರುವ ಒಳ್ಳೆಯ ಅಂಶವು ಚರ್ಮದ ಮೃದುತ್ವವನ್ನು ಕಾಪಾಡುತ್ತವೆ . ಚಳಿಗಾಲದಲ್ಲಿ ಒಣಚರ್ಮಕ್ಕೆ ಹಚ್ಚಿದಾಗ ಚರ್ಮವನ್ನು ಮೃದುವಾಗುವಂತೆ ಮಾಡುತ್ತದೆ. ಚರ್ಮ ಬರ್ನ್ ಆಗುವುದನ್ನು ತಡೆಗಟ್ಟುತ್ತದೆ. ಬೇಸಿಗೆ ಕಾಲದಲ್ಲಿ ತ್ವಚೆ ಬಿಸಿಲಿಗೆ ಹಾಳಾಗುವುದಲ್ಲದೆ ಸನ್ ಬರ್ನ್‌ ಉಂಟಾಗುತ್ತದೆ. ಇದಕ್ಕಾಗಿ ನೀವು ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಕ್ರೀಮ್ ಗಳನ್ನು ಖರೀದಿಸುವ ಬದಲು ಅಲೊವೆರ ಜೆಲ್ ಅನ್ನು ಹಚ್ಚುವುದರಿಂದ ಉತ್ತಮವಾದ ಪರಿಹಾರವನ್ನು ಪಡೆಯಬಹುದು.

​ಪೋಷಕಾಂಶಗಳ ಆಗರ

ಅಲೋವೆರಾ ಜ್ಯೂಸ್ ನಲ್ಲಿ ಎಲ್ಲಾ ವಿಧವಾದ ಪ್ರಮುಖ ಪೋಷಕಾಂಶಗಳಿವೆ. ಅವುಗಳಲ್ಲಿ ಪ್ರಮುಖವಾದವೆಂದರೆ ವಿಟಮಿನ್ ಬಿ, ಸಿ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಕಾಪರ್, ಸೋಡಿಯಂ, ಸೆಲೆನಿಯಂ, ಮೆಗ್ನೀಷಿಯಂ, ಜಿಂಕ್ ಮ್ಯಾಂಗನೀಸ್ ಇತ್ಯಾದಿಗಳಿವೆ. ಎಲ್ಲಾ ಪೋಷಕಾಂಶಗಳು ಒಂದರಲ್ಲೇ ದೊರೆತ ಮೇಲೆ ಅದು ಪೋಷಕಾಂಶಗಳ ಆಗರವೇ ಸರಿ. ಒಂದು ಜ್ಯೂಸನ್ನು ಕುಡಿಯುವುದರಿಂದ ಇಷ್ಟೆಲ್ಲಾ ಆರೋಗ್ಯ ಲಾಭಗಳನ್ನು ಪಡೆಯುವುದಾದರೆ ಅದನ್ನು ಸೇವಿಸಿದರೆ ಉತ್ತಮವಾದ ಆರೋಗ್ಯ ದೊರೆಯುವುದು.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಆಯುರ್ವೇದದಲ್ಲಿ ಆರೋಗ್ಯಯುತ ಕಿಣ್ವಗಳಿಗೆ ಇದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದು ದೇಹದಲ್ಲಿನ ರಕ್ತದ ಪ್ರಮಾಣ ಮತ್ತು ಕೊಬ್ಬಿನ ಅಂಶವನ್ನು ಅತಿಸುಲಭವಾಗಿ ಕಡಿಮೆಗೊಳಿಸುತ್ತದೆ. ಕೆಲವೊಂದು ಸಮಯದಲ್ಲಿ ಹೊಟ್ಟೆಯಲ್ಲಿ ಉಂಟಾಗುವ ಕಿರಿಕಿರಿಯನ್ನು ತಡೆಗಟ್ಟಿ ಉತ್ತಮವಾದ ಕರುಳಿನ ಆರೋಗ್ಯವನ್ನು ನೀಡುತ್ತದೆ. ಅಲೋವೆರಾ ಜೀರ್ಣಾಕ್ರಿಯೆಗೆ ಉತ್ತೇಜನ ನೀಡುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ. ಇದು ದೇಹದಲ್ಲಿ ವಿವಿಧ ಭಾಗಗಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಮೂಲಕ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಶಕ್ತಿಯನ್ನು ಹೆಚ್ಚಿಸುತ್ತದೆ

ಅಲೋವೆರಾದಲ್ಲಿರುವ ಉನ್ನತಮಟ್ಟದ ಪೋಷಕಾಂಶಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ. ಏಕೆಂದರೆ ಪೌಷ್ಟಿಕಾಂಶಗಳು, ವಿಟಮಿನ್ ಮತ್ತು ಮಿನರಲ್ ಗಳನ್ನು ನಿಯಮಿತವಾಗಿ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿನ ಅಂಗಾಂಶಗಳು ಚಟುವಟಿಕೆಯಿಂದ ಕೂಡಿರುತ್ತದೆ.ನೀವೇನಾದರೂ ಹೆಚ್ಚು ಚಟುವಟಿಕೆಯಿಂದ ಕೂಡಿರಬೇಕೆಂಬ ಬಯಕೆಯನ್ನೂ ಹೊಂದಿದ್ದರೆ ಪ್ರತಿನಿತ್ಯ ನೀವು ಅಲೋವೆರಾ ಜ್ಯೂಸ್ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನೀವು ಮೊದಲಿಗಿಂತಲೂ ಹೆಚ್ಚು ಚಟುವಟಿಕೆಯಿಂದ ಇರಬಹುದು.

ಕೂದಲಿನ ಆರೋಗ್ಯಕ್ಕೆ ಉತ್ತಮವಾದದ್ದು

ಅಲೋವೆರಾವೂ ಆರೋಗ್ಯದ ಜೊತೆಗೆ ಚರ್ಮ ಮತ್ತು ಕೂದಲಿಗೆ ತುಂಬಾ ಒಳ್ಳೆಯದು. ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಬಹುದು. ಅಲೋವೆರಾದಲ್ಲಿರುವ ಪ್ರೋಟಿಯೋಲೈಟಿಕ್ ಎಂಬ ಅಂಶವು ನೆತ್ತಿಯ ಭಾಗದಲ್ಲಿ ಹಾನಿಗೊಳಗಾದ ಜೀವಕೋಶಗಳನ್ನು ಉತ್ತಮಪಡಿಸುತ್ತದೆ. ಅಲೋವೆರಾ ಜ್ಯೂಸ್ ಕುಡಿಯುವುದರ ಜೊತೆಗೆ ಇದನ್ನು ಕೂದಲಿಗೆ ಹಚ್ಚಿದರೆ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ.

ಅಲೋವೆರ ಜ್ಯೂಸ್ ಅದ್ಭುತ ಔಷಧೀಯ ಶಕ್ತಿಗಳನ್ನು ಒಳಗೊಂಡಿದೆ ಇದು ಅಸಂಖ್ಯಾತ ಪ್ರಯೋಜನಗಳನ್ನು ಮಾಡುತ್ತದೆ. ಮೇಲೆ ತಿಳಿಸಿರುವ ಎಲ್ಲಾ ಆರೋಗ್ಯದ ಲಾಭಗಳನ್ನು ಅಲೋವೆರಾಜ್ಯೂಸ್ ಕುಡಿಯುವುದರಿಂದ ಪಡೆಯಬಹುದು. ಅಲೋವೆರಾ ಒಂದು ನೈಸರ್ಗಿಕವಾಗಿ ದೊರೆವಂತಹ ಸಸ್ಯವಾಗಿದ್ದು ಇದು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಉತ್ತಮ ಆರೋಗ್ಯ ಬೇಕಾದಲ್ಲಿ ಪ್ರತಿನಿತ್ಯವೂ ಅಲೋವೆರಾ ಜ್ಯೂಸ್ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡು ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳಿ.

?️ ಶರತ್ ಶೆಟ್ಟಿ

- Advertisement -

Related news

error: Content is protected !!