Friday, April 26, 2024
spot_imgspot_img
spot_imgspot_img

ಅಳಿಕೆ: ಪಾಂಡವರ ಕೋಟೆ ರಕ್ಷಣೆ ಮಾಡುವಲ್ಲಿ ವಿಫಲ; ರಾಜಕೀಯ ನಾಯಕರ, ಅಧಿಕಾರಿ ವರ್ಗದ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ – ಅಳಿಕೆ‌, ಪೆರುವಾಯಿ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

- Advertisement -G L Acharya panikkar
- Advertisement -

ಐತಿಹಾಸಿಕ ಬೆಟ್ಟ ಪಾಂಡವರ ಕೋಟೆ ರಕ್ಷಣೆ ಮಾಡುವಲ್ಲಿ ವಿಫಲರಾದ ಮತ್ತು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಗೆ ಬೆಂಬಲಕೊಟ್ಟ ಹಲವರ ವಿರುದ್ಧ ಅಳಿಕೆ‌ ಮತ್ತು ಪೆರುವಾಯಿ ಗ್ರಾಮಸ್ಥರು ಆಕ್ರೋ ವ್ಯಕ್ತಪಡಿಸಿದ್ದಾರೆ. ಈ ಅಕ್ರಮಕ್ಕೆ ಪಂಚಾಯತ್ ಸದಸ್ಯರ ಬೆಂಬಲ, ಜಿಲ್ಲಾಡಳಿತ ಮತ್ತು ಪುತ್ತೂರು ಶಾಸಕರ ಬೆಂಬಲ ಖಂಡಿಸಿ ಬರುವ ಮುಂದಿನ ಎಲ್ಲಾ ಚುನಾವಣಾ ಬಹಿಷ್ಕರಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕೋಟೆತ್ತಡ್ಕ ಐತಿಹಾಸಿಕ ಬೆಟ್ಟ ಪಾಂಡವರ ಕೋಟೆಯಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಹಗಲು ರಾತ್ರಿ ಎನ್ನದೆ ದಿನದ 24 ಘಂಟೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದು ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಐತಿಹಾಸಿಕ ಬೆಟ್ಟವನ್ನು ನಾಶ ಮಾಡುವುದರೊಂದಿಗೆ ಇಲ್ಲಿ ಘನತಾಜ್ಯ ಘಟಕ ಸ್ಥಾಪಿಸಿ ಅಪವಿತ್ರಗೊಳಿಸಲು ರಾಜಕೀಯ ನಾಯಕರು ತಾ ಮುಂದು ತಾ ಮುಂದು ಎಂದು ಬರುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರಿಗೆ ಈ ಬೆಟ್ಟದ ಇತಿಹಾಸ ಗೊತ್ತಿಲ್ಲವೇನೋ ಎಂಬುವುದೇ ಆಶ್ಚರ್ಯವಾಗಿದೆ.

ಈ ಬಗ್ಗೆ ವಿಟಿವಿ ವಿಸ್ತಾರವಾದ ವರದಿಯನ್ನು ಪ್ರಕಟ ಮಾಡಿತ್ತು. ಆ ವರದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ: https://bit.ly/3hR62F2

ಕಾಡು, ಮರ ಗಿಡಗಳನ್ನು ಕಡಿದು, ಭೂಮಿಯನ್ನು ಅಗೆದು, ವಾಹನ ಚಲಾವಣೆಗೆ ಸಂಪರ್ಕ ರಸ್ತೆ ಕಲ್ಪಿಸಿ, ಗೇಟ್ ನಿರ್ಮಿಸಿ, ತಮಗೆ ಇಷ್ಟ ಬಂದಂತೆ ಪ್ರಕೃತಿ ಮಾತೆಯ ಮೇಲೆ ಅತ್ಯಾಚಾರ ಮಾಡಲು ಇವರಿಗೆ ಇಷ್ಟೆಲ್ಲಾ ಕಾರ್ಯವೈಖರಿಗೆ ಅನುಮತಿ ನೀಡಿದವರು ಯಾರು? ಈ ಬಗ್ಗೆ ಹೇಳೋರು ಕೇಳೋರು ಯಾರೂ ಇಲ್ಲವೆ? ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಗಣಿ ಇಲಾಖೆಗೆ, ಶಾಸಕರಿಗೆ ಮನವಿಸಲ್ಲಿಸಿದರೂ ಇವರೆಲ್ಲರೂ ಕಣ್ಣಿದ್ದು ಕುರುಡರಂತಿರುವುದು ಸಾರ್ವಜನಿಕರಲ್ಲಿ ತೀರ್ವ ಆಕ್ರೋಶ ಮೂಡಿಸಿದೆ. ಇಂತಹ ಭೀಕರ ಪ್ರಕೃತಿ ನಾಶ ಕೃತ್ಯದಲ್ಲಿ ಶಾಸಕರ, ಗಣಿ ಇಲಾಖೆಯ, ಸಂಬಂಧ ಪಟ್ಟ ಅಧಿಕಾರಿಗಳ ಕೈವಾಡ ಇದೆಯೋ..? ಎಂಬುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!