Thursday, May 2, 2024
spot_imgspot_img
spot_imgspot_img

ಅ30 ರಂದು ಬಂಟರ ಸಂಘ ಮಾಣಿ ವಲಯ (ರಿ) ಇದರ ವತಿಯಿಂದ ಬಂಟರ ಕ್ರೀಡಾಕೂಟ

- Advertisement -G L Acharya panikkar
- Advertisement -

ಬಂಟರ ಸಂಘ ಮಾಣಿ ವಲಯ (ರಿ) ಬಂಟ್ವಾಳ ತಾಲೂಕು ಇದರ ವತಿಯಿಂದ ಬಂಟರ ಕ್ರೀಡಾಕೂಟವು ದಿನಾಂಕ : 30-10-2022ನೇ ಆದಿತ್ಯವಾರ ಸಮಯ : ಬೆಳಗ್ಗೆ ಘಂಟೆ 9.00 ರಿಂದ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜು ಕ್ರೀಡಾಂಗಣ ಅಯೋಧ್ಯನಗರ, ಪೆರ್ನೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಾಣಿ ವಲಯದ ಮಾಣಿ, ಅನಂತಾಡಿ, ನೆಟ್ಲಮಡ್ನೂರು, ಪೆರಾಜೆ, ಕೆದಿಲ, ಬರಿಮಾರು ಕಡೇಶಿವಾಲಯ, ಪರ್ನೆ, ಬಿಳಿಯೂರು ಗ್ರಾಮದ ಸ್ವಜಾತಿ ಬಾಂಧವರು ಪಾಲ್ಗೊಳ್ಳಬಹುದು.

ಬೆಳಗ್ಗೆ ಘಂಟೆ 9 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಶೆಟ್ಟಿ ಸಂಪಿಗೆಕೋಡಿ ಕಳೆಂಜ ಬಂಟರ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಬಂಟರ ಸಂಘ ಮಾಣಿ ವಲಯದ ಅಧ್ಯಕ್ಷ ಬಿ. ಎಂ. ಗಂಗಾಧರ ರೈ, ನಿಸರ್ಗ ವಡ್ಯದಗಯ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜು, ಪರ್ನೆ ಇದರ ಸಂಚಾಲಕ & ಉಚ್ಛ ನ್ಯಾಯಾಲಯದ ವಕೀಲ ಹರೀಶ್ ಭಂಡಾರಿ, ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ ಸಂಪಿಗೆಕೋಡಿ ಕಳೆಂಜ, ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶೇಖರ ರೈ ಆಗಮಿಸಲಿದ್ದಾರೆ.

ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಬಂಟರ ಸಂಘ ಮಾಣಿ ವಲಯದ ಅಧ್ಯಕ್ಷ ಬಿ. ಎಂ. ಗಂಗಾಧರ ರೈ, ನಿಸರ್ಗ ವಡ್ಯದಗಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಬಂಟರ ಸಂಘ ಬಂಟವಾಳ ತಾಲೂಕು ಇದರ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ, ರೈ ಎಸ್ಟೇಟ್, ಕೋಡಿಂಬಾಡಿ ಇದರ ಅಶೋಕ್ ಕುಮಾರ್‌ ರೈ, ಅಸಿಸ್ಟೆಂಟ್ ಕನ್ಸರ್‌ವೇಟರ್ ಆಫ್ ಫಾರೆಸ್ಟ್ ಆಫೀಸರ್‍ ಹಸ್ತಾ ಪಿ. ಶೆಟ್ಟಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರಹ್ಲಾದ ಶೆಟ್ಟಿ ಜಡ್ತಿಲ ಸಂಚಾಲಕರು, ಬಂಟರ ಸಂಘ ಬಂಟವಾಳ ತಾಲೂಕು ಇದರ ಉಪಾಧ್ಯಕ್ಷ ಪ್ರಶಾಂತ ಮಾರ್ಲ, ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್ ಭಂಡಾರಿ ಉಪಸ್ಥಿತಿ ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಬಡ್ಡಿ ಆಟಗಾರ ಧನುಷ್ ಶೆಟ್ಟಿ ಮಾಣಿ, ಕರಾಟೆಪಟು ರಿಷಭ್ ಆರ್. ರೈ ಗೋಳಿಕಟ್ಟೆ ಅನಂತಾಡಿ ಇವರನ್ನು ಸನ್ಮಾನಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ, ಹಿರಿಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.

  • ಎಲ್.ಕೆ.ಜಿ & ಯು.ಕೆ.ಜಿ. ಪುಟಾಣಿಗಳಿಗೆ : 0 50 ಮೀ ಓಟ | ಲಿಂಬೆ ಚಮಚ ಓಟ
  • 1 ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ : 50 ಮೀ. ಓಟ | ಲಿಂಬೆ ಚಮಚ ಓಟ
  • 4 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ :  100 ಮೀ ಓಟ | 50 ಮೀ ಒಂಟಿಕಾಲಿನ ಓಟ
  • 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ : 100 ಮೀ ಓಟಿ | 50 ಮೀ ಒಂಟಿಕಾಲಿನ ಓಟ
  • ಪ್ರಥಮ ಪಿ.ಯು.ಸಿ.ಯಿಂದ 25 ವರ್ಷ ಒಳಗಿನವರಿಗೆ:  100 ಮೀ ಓಟ | ಗುಂಡೆಸೆತ
  • 26 ರಿಂದ 40 ವರ್ಷದ ಒಳಗಿನವರಿಗೆ: 100 ಮೀ ಓಟ | ಗುಂಡೆಸೆತ
  • 41ರಿಂದ 50 ವರ್ಷದ ಒಳಗಿನವರಿಗೆ · 100 ಮೀ ಓಟ | ಗುಂಡೆಸೆತ
  • 51ರಿಂದ 60 ವರ್ಷ ಒಳಗಿನ ಹಿರಿಯ ನಾಗರಿಕರಿಗೆ :  50ಮೀ ಓಟ | ಗುಂಡೆಸೆತ
  • 61 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ: ವೇಗದ ನಡಿಗೆ

ಗುಂಪು ಸ್ಪರ್ಧೆಗಳು
ಪುರುಷರಿಗೆ
ವಾಲಿಬಾಲ್ 6+1= 7 ಸದಸ್ಯರು
ಕಬಡ್ಡಿ 7+1 = 8 ಸದಸ್ಯರು
ಹಗ್ಗಜಗ್ಗಾಟ 7+1 = 8 ಸದಸ್ಯರು

ಮಹಿಳೆಯರಿಗೆ
ತ್ರೋಬಾಲ್ 9+1 = 10 ಸದಸ್ಯರು
ಹಗ್ಗಜಗ್ಗಾಟ 7+1 = 8 ಸದಸ್ಯರು

- Advertisement -

Related news

error: Content is protected !!