Sunday, June 14, 2026
spot_imgspot_img
spot_imgspot_img

ಏರ್ ಪೋರ್ಟ್ ನತ್ತ ಪ್ರಯಾಣಿಸುತ್ತಿದ್ದ ಸಿಎಂ ಯಡಿಯೂರಪ್ಪನವರಿಗೆ ದಿಢೀರ್ ಕರೆ ನೀಡಿದ ಅಮಿತ್ ಶಾ!

- Advertisement -
- Advertisement -

ನವದೆಹಲಿ: ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಲು ಏರ್ ಪೋರ್ಟ್ ನತ್ತ ಪ್ರಯಾಣಿಸುತ್ತಿದ್ದ ವೇಳೆ ಗೃಹಸಚಿವ ಅಮಿತ್ ಶಾ ದಿಢೀರ್ ಕರೆ ನೀಡಿದ್ದಾರೆ.

ನಿನ್ನೆ ಸಂಜೆ ಸಿಎಂ ಯಡಿಯೂರಪ್ಪನವರು ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದು, ಇಂದು ಬೆಳಿಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಭೇಟಿಯಾಗಿದ್ದರು. ಬಳಿಕ ಅಮಿತ್ ಶಾ ಭೇಟಿಗೆ ಕಾಲಾವಕಾಶ ಸಾಧ್ಯವಾಗದೇ ಬೆಂಗಳೂರಿಗೆ ಹಿಂದಿರುಗಲು ಮುಂದಾದ ಸಿಎಂ ಯಡಿಯೂರಪ್ಪನವರು ಏರ್ ಪೋರ್ಟ್ ಗೆ ಬಂದಿದ್ದರು. ಅಷ್ಟರಲ್ಲಿ ಅಮಿತ್ ಶಾ ಸಿಎಂ ಯಡಿಯೂರಪ್ಪನವರಿಗೆ ಕರೆ ಮಾಡಿ ಬುಲಾವ್ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಏರ್ ಪೊರ್ಟ್ ನಿಂದ ವಾಪಸ್ ಆಗಿ ಅಮಿತ್ ಶಾ ನಿವಾಸಕ್ಕೆ ತೆರಳಿರುವ ಯಡಿಯೂರಪ್ಪ ಶಾ ಭೇಟಿಯಾಗಿ ಸಮಾಲೋಚನೆ ನಡೆಸಿದ್ದು, ಅಮಿತ್ ಶಾ ನಿವಾಸದಲ್ಲಿ ಸಭೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!