Monday, April 29, 2024
spot_imgspot_img
spot_imgspot_img

ಆಟವಾಡಿ ಬಂದು ಮನೆಯಲ್ಲಿ ಮಲಗಿದ್ದ ಬಾಲಕಿ ಹೃದಯಾಘಾತದಿಂದ ಮೃತ್ಯು

- Advertisement -G L Acharya panikkar
- Advertisement -
vtv vitla

ಹೈದರಾಬಾದ್ : 13ರ ಹರೆಯದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಹಬೂಬಾಬಾದ್ ಮಾರಿಪೇಡಾ ಮಂಡಲದಲ್ಲಿ ನಡೆದಿದೆ.

6ನೇ ತರಗತಿಯ ಬೋಡಾ ಶ್ರವಂತಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ರಾತ್ರಿ ಮಲಗಿದ ಕೆಲವು ಗಂಟೆಗಳ ನಂತರ, 12.30 ರ ಸುಮಾರಿಗೆ ಬಾಲಕಿಗೆ ಎಚ್ಚರವಾಯಿತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಅವಳು ತನಗೆ ಎದೆನೋಯುತ್ತಿರುವ ಬಗ್ಗೆ ಅಜ್ಜಿಗೆ ತಿಳಿಸಿದಳು. ಕುಟುಂಬದ ಸದಸ್ಯರು ಅವಳನ್ನು ವೈದ್ಯರ ಬಳಿಗೆ ಕರೆದೊಯ್ಯಲು ಆಟೋವನ್ನು ಕರೆತರುವ ವೇಳೆಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಾಲಕಿ ಸಾವನ್ನಪ್ಪಿದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಬಾಲಕಿ ಮಾರಿಪೇಡಾದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಬಾಲಕಿಯ ಪೋಷಕರು ಕೃಷಿಕರಾಗಿದ್ದು, ಈಕೆ ಎರಡನೇ ಮಗಳು. ಇನ್ನೂ ಬಾಳಿ ಬದುಕಬೇಕಿದ್ದ ಮಗಳ ಸಾವಿನಿಂದ ಕುಟುಂಬದಲ್ಲಿ ಶೋಕ ಆವರಿಸಿದೆ. ಗುರುವಾರ ಶ್ರೀರಾಮ ನವಮಿ ನಿಮಿತ್ತ ಶಾಲೆಗಳಿಗೆ ರಜೆ ಇದ್ದ ಕಾರಣ ಬಾಲಕಿ ತನ್ನ ಸ್ನೇಹಿತರೊಂದಿಗೆ ಆಟವಾಡಿ ಅಜ್ಜಿಯ ಮನೆಯಲ್ಲಿ ಮಲಗಿದ್ದಳು.

- Advertisement -

Related news

error: Content is protected !!