Monday, May 6, 2024
spot_imgspot_img
spot_imgspot_img

ಆಧುನೀಕರಣದತ್ತ ಭಾರತೀಯ ವಾಯುಪಡೆ ದಾಪುಗಾಲು; ಎಂಜಿನ್ ಅಭಿವೃದ್ಧಿಯೇ ದೊಡ್ಡ ಸವಾಲು

- Advertisement -G L Acharya panikkar
- Advertisement -

ಭಾರತದ ಸುಧಾರಿತ ಮಧ್ಯಮ ಯುದ್ಧ ವಿಮಾನ (Advanced Medium Combat Aircraft – AMCA) ಯೋಜನೆಯು ಭಾರತೀಯ ವಾಯುಪಡೆಯ ಆಧುನೀಕರಣ ಮತ್ತು ಸ್ವದೇಶೀಕರಣದ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಭಾರತಕ್ಕೆ ಎಂಜಿನ್ ಪೂರೈಸಲು ಬ್ರಿಟನ್​ನ ರೋಲ್ಸ್ ರಾಯ್ಸ್, ಫ್ರಾನ್ಸ್​ನ ಸಫ್ರಾನ್ ಮತ್ತು ಅಮೆರಿಕದ ಜನರಲ್ ಎಲೆಕ್ಟ್ರಿಕಲ್ ಕಂಪನಿಗಳು (ಜಿಇ) ಸ್ಪರ್ಧೆಯಲ್ಲಿವೆ ಎಂದು ಯೂರೋಪ್​ನ ಉದ್ಯಮಗಳನ್ನು ನಿಯಮಿತವಾಗಿ ವರದಿ ಮಾಡುವ ಯೂರೋಏಷ್ಯನ್ ಟೈಮ್ಸ್​ ಜಾಲತಾಣ ವರದಿ ಮಾಡಿದೆ.

ಇಂಥ ವಿಮಾನಗಳಿಗೆ ದೇಶೀಯವಾಗಿ ಎಂಜಿನ್‌ ಅಭಿವೃದ್ಧಿಪಡಿಸುವ ಪ್ರಯತ್ನಗಳಿಗೆ ಆಂಥ ಯಶಸ್ಸು ಸಿಕ್ಕಿಲ್ಲ. ತುರ್ತುಸ್ಥಿತಿಯನ್ನು ಪರಿಗಣಿಸಿ, ಬಹು-ಪಾತ್ರದ ವಿಮಾನವು ವಿದೇಶದಿಂದ ಅಭಿವೃದ್ಧಿಪಡಿಸಲಾದ ಎಂಜಿನ್‌ಗಳಿಂದ ಶಕ್ತಿಯನ್ನು ಪಡೆಯುತ್ತಿದೆ. ವಿಮಾನಕ್ಕೆ ಯಾವ ಎಂಜಿನ್ ಶಕ್ತಿ ನೀಡಲಿದೆ ಎಂಬ ಬಗ್ಗೆ ಹಲವು ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ.

ಈಗಾಗಲೇ 5.5 ತಲೆಮಾರಿನ ವಿಮಾನ ಎನ್ನಲಾಗುತ್ತಿರುವ ಹಾಗೂ ಶೀಘ್ರದಲ್ಲೇ ಪ್ರಾಯೋಗಿಕ ಮಾದರಿಯ ಉತ್ಪಾದನಾ ಹಂತಕ್ಕೆ ಪ್ರವೇಶಿಸುತ್ತಿರುವ ಎಎಂಸಿಎ ಯುದ್ಧವಿಮಾನವನ್ನು ವಾಯುಪಡೆಯ ಮಾಜಿ ಮುಖ್ಯಸ್ಥ ಆರ್‌.ಕೆ.ಎಸ್.ಬಧೋರಿಯಾ ಉಲ್ಲೇಖಿಸಿದಂತೆ ಆರನೇ ತಲೆಮಾರಿನ ತಂತ್ರಜ್ಞಾನದೊಂದಿಗೆ ಜೋಡಿಸುವ ಉದ್ದೇಶ ಇರಿಸಿಕೊಳ್ಳಲಾಗಿದೆ.

ಮಾರ್ಗದರ್ಶಿ ಕ್ಷಿಪಣಿಗಳು, ಉನ್ನತ ಮಟ್ಟದ ಕ್ಷಿಪಣಿ ನಿರೋಧಕ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳೊಂದಿಗೆ ವಿಮಾನವನ್ನು ಸಜ್ಜುಗೊಳಿಸಲು ಡಿಆರ್‌ಡಿಒ ಯೋಜಿಸುತ್ತಿದೆ. ಇದು ಏವಿಯಾನಿಕ್ಸ್ ಸೂಟ್ ಸುಧಾರಿತ ರಾಡಾರ್‌ಗಳು ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆಗಳನ್ನು ಹೊಂದಿದೆ. ಎಎಂಸಿಎ (AMCA) ಒಳಗೊಂಡಿರುವ ಶಸ್ತ್ರಾಸ್ತ್ರದ ಹೆಚ್ಚಿನ ವಿವರಗಳು ಲಭ್ಯವಿಲ್ಲ.

ಈ ಫೈಟರ್ ಜೆಟ್ 2024ರ ವೇಳೆಗೆ ತನ್ನ ಮೊದಲ ಹಾರಾಟ ನಡೆಸುವ ನಿರೀಕ್ಷೆಯಿದೆ. ಆದರೆ ಎಎಂಸಿಎಗೆ ಯಾವ ಎಂಜಿನ್ ಶಕ್ತಿ ನೀಡಲಿದೆ ಎಂಬುದನ್ನು ವಾಯುಪಡೆ ಇನ್ನೂ ಅಂತಿಮಗೊಳಿಸಿಲ್ಲ. ಭಾರತಕ್ಕೆ ಎಂಜಿನ್ ಪೂರೈಸಲು ಬ್ರಿಟನ್​ನ ರೋಲ್ಸ್ ರಾಯ್ಸ್, ಫ್ರಾನ್ಸ್​ನ ಸಫ್ರಾನ್ ಮತ್ತು ಅಮೆರಿಕದ ಜನರಲ್ ಎಲೆಕ್ಟ್ರಿಕಲ್ ಕಂಪನಿಗಳು (ಜಿಇ) ಸ್ಪರ್ಧೆಯಲ್ಲಿವೆ.

ರಷ್ಯಾದ ಜತೆಗೆ ಜಂಟಿಯಾಗಿ ಅಭಿವೃದ್ಧಿಪಡಿಸಬೇಕಿದ್ದ ಐದನೇ ತಲೆಮಾರಿನ ಫೈಟರ್ ಏರ್‌ಕ್ರಾಫ್ಟ್ ಯೋಜನೆಯಿಂದ ಭಾರತವು ಹಿಂದೆ ಸರಿದ ಮೇಲೆ, ಮೇಕ್-ಇನ್-ಇಂಡಿಯಾ ಉಪಕ್ರಮದ ಅಡಿಯಲ್ಲಿ ಭಾರತವು ಶತ್ರುಗಳ ಕಣ್ಣು ತಪ್ಪಿಸಿ ಸಂಚರಿಸುವ ಸಾಮರ್ಥ್ಯವಿರುವ ಸ್ಟೆಲ್ತ್ ಏರ್‌ಕ್ರಾಫ್ಟ್ ಅನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವತ್ತ ಗಮನ ಹರಿಸಲು ಪ್ರಾರಂಭಿಸಿತು ಎಂದು ಅಭಿಪ್ರಾಯಪಡುತ್ತಾರೆ.

- Advertisement -

Related news

error: Content is protected !!