Wednesday, May 8, 2024
spot_imgspot_img
spot_imgspot_img

ಚೀನಾದಲ್ಲೇ ಹುಟ್ಟಿದ್ದ ಮತ್ತೊಂದು ಭಯಾನಕ ವೈರಸ್​ನಿಂದ ಭಾರತಕ್ಕೂ ಆತಂಕ;​ ಈ​ ಪ್ಲೇಗ್ ಎಷ್ಟು ಡೇಂಜರಸ್..?

- Advertisement -G L Acharya panikkar
- Advertisement -
driving

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಾರಕ ಕೊರೋನಾ ವೈರಸ್​ ಬಳಿಕ ಬಬೊನಿಕ್​ ಪ್ಲೇಗ್​ ಎಂಬ ಮತ್ತೊಂದು ರೋಗ ಚೀನಾದಲ್ಲಿ ಕಾಣಿಸಿಕೊಂಡಿತ್ತು. ಮೊದಲಿಗೆ ಮಂಗೋಲಿಯಾಗೆ ಹೊಂದಿಕೊಂಡಿರುವ ಚೀನಾದ ವ್ಯಾಪ್ತಿಯಲ್ಲಿರುವ ಬಯನ್ನೂರ್​ ಪ್ರದೇಶದಲ್ಲಿ ಈ ರೋಗ ಕಾಣಿಸಿಕೊಂಡಿತ್ತು.

ಬಳಿಕ ಕೇವಲ ಚೀನಾ ಮಾತ್ರವಲ್ಲದೇ ಭಾರತದಲ್ಲೂ ಇದರ ಆರ್ಭಟ ಮುಂದುವರಿದಿದೆ. ಈ ಬಬೊನಿಕ್​ ಪ್ಲೇಗ್ ರೋಗ ಕಾಣಿಸಿಕೊಂಡ ಬೆನ್ನಲ್ಲೇ ಸುಮಾರು ಆರು ತಿಂಗಳುಗಳ ಕಾಲ ರೆಡ್​​ ಅಲರ್ಟ್​ ಜಾರಿಯಲ್ಲಿತ್ತು. ಈಗ ಮತ್ತೆ ಬಬೊನಿಕ್​ ಪ್ಲೇಗ್ ರೋಗ ಸುದ್ದಿಯಾಗುತ್ತಿದೆ.
ಹೌದು, ರಷ್ಯಾದ ಪ್ರಖ್ಯಾತ ವೈದ್ಯರೊಬ್ಬರು ಜಾಗತಿಕ ತಾಪಮಾನ ಏರಿಕೆಯಿಂದ ಮತ್ತೆ ಬಬೊನಿಕ್​ ಪ್ಲೇಗ್ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಒಂದು ವೇಳೆ ರೋಗ ಕಾಣಿಸಿಕೊಂಡಲ್ಲಿ ಬೀದಿಯಲ್ಲೇ ಹೆಣಗಳು ಬೀಳುತ್ತವೆ ಎಂಬ ಆಘಾತಕಾರಿ ಸುದ್ದಿಯೊಂದು ತಿಳಿಸಿದ್ದಾರೆ. ಇತ್ತೀಚಿನ ಅಧಿಕೃತ ವರದಿಯೊಂದರ ಪ್ರಕಾರ ಅಳಿಲಿನಲ್ಲಿ ಬಬೋನಿಕ್​ ಪ್ಲೇಗ್​ ಕಾಣಿಸಿಕೊಂಡಿದೆ. ಈ ಬಬೊನಿಕ್​ ಪ್ಲೇಗ್​ ಕೂಡ ಚೀನಾದಲ್ಲೇ ಹುಟ್ಟಿದ್ದು. ಕೆಲವೇ ದಿನಗಳ ಹಿಂದೆ ಚೀನಾ ಈ ಬಗ್ಗೆ ಎಚ್ಚರಿಕೆ ನೀಡಿತ್ತು.

ಬಬೋನಿಕ್​ ಪ್ಲೇಗ್ ಹುಟ್ಟುವುದು ಇಲಿ, ಅಳಿಲಿನಂತಹ ಮಾರ್ಮೋಟ್​ ಜಾತಿಗೆ ಸೇರಿದ ಪ್ರಾಣಿಗಳಿಂದ. ಈ ರೋಗ ಹೊಂದಿದ ಪ್ರಾಣಿಗಳ ಮಾಂಸ ತಿಂದರೆ ಮನುಷ್ಯರಿಗೂ ಸೋಂಕು ತಗುಲುತ್ತದೆ. ಇದಕ್ಕೆ 24 ಗಂಟೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾವು ನಿಶ್ಚಿತ ಎಂದು ಎಚ್ಚರಿಕೆ ನೀಡಿತ್ತು.

ಇನ್ನು, ಬಬೋನಿಕ್​ ಪ್ಲೇಗ್​ ಕಾಣಿಸಿಕೊಂಡವರಲ್ಲಿ ಜ್ವರ, ತಲೆನೋವು, ಶೀತ, ವೀಕ್​ನೆಸ್​ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಮೈಮೇಲೆ ನೋವಿನ ಗುಳ್ಳೆಗಳೂ ಏಳುತ್ತವೆ. ಯುರೋಪ್​ನಲ್ಲಿ 1347 ಮತ್ತು 1351ರ ನಡುವೆ ಈ ಬಬೊನಿಕ್​ ಪ್ಲೇಗ್​ ವಿಪರೀತವಾಗಿ ಹರಡಿತ್ತು. ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದರು.

- Advertisement -

Related news

error: Content is protected !!