Friday, April 19, 2024
spot_imgspot_img
spot_imgspot_img

ಆನ್‌ಲೈನ್‌ ಹೂಡಿಕೆಯಲ್ಲಿ ಮೋಸ ಹೋದ ಉಪನ್ಯಾಸಕಿ ಆತ್ಮಹತ್ಯೆ

- Advertisement -G L Acharya panikkar
- Advertisement -

ಆನ್‌ಲೈನ್​ನಲ್ಲಿ ಪರಿಚಿತನಾದ ವ್ಯಕ್ತಿಗೆ ಹಣ ಹಾಕಿ ಮೋಸಹೋದ ಉಪನ್ಯಾಸಕಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬೀದರ್‌ನ ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರ ಗ್ರಾಮದಲ್ಲಿ ನಡೆದಿದೆ. ಆರತಿ ಕನಾಟೆ (28) ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿ.

ನಗರದ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರತಿ ಅವರಿಗೆ ಆನ್​ಲೈನ್ ಮೂಲಕ ವ್ಯಕ್ತಿಯೊಬ್ಬ ಪರಿಚಯವಾಗಿದ್ದರಂತೆ. ಉಪನ್ಯಾಸಕಿಯು ತಮ್ಮ ಕೈಯಲ್ಲಿದ್ದ ಹಣ ಸೇರಿದಂತೆ ಸಾಲ ಮಾಡಿ ಹಂತ-ಹಂತವಾಗಿ ಸುಮಾರು 2 ಲಕ್ಷಕ್ಕೂ ಅಧಿಕ ಹಣವನ್ನು ವ್ಯಕ್ತಿ ಬಳಿ ಹೂಡಿಕೆ ಮಾಡಿದ್ದರು. ಇನ್ನೂ 82 ಸಾವಿರ ಹಾಕಿದರೆ ಮಾತ್ರ ನಿಮ್ಮೆಲ್ಲ ಎಲ್ಲ ಹಣ ವಾಪಸ್ ಬರುತ್ತದೆ ಎಂದು ಆ ವ್ಯಕ್ತಿ ನಂಬಿಸಿದ್ದರಂತೆ. ಹಣ ವಾಪಸಾಗುವ ಯಾವುದೇ ಲಕ್ಷಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ಮನನೊಂದು ಆರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿರುವ ಆರತಿ, ಗ್ರಾಮದಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ತಂಡ, ಬಾವಿಯಿಂದ ಶವ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.ಆರತಿ ತಂದೆ ಶಿವರಾಜ ಕನಾಟೆ ನೀಡಿದ ದೂರಿನ ಮೇರೆಗೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!