Saturday, April 20, 2024
spot_imgspot_img
spot_imgspot_img

ಆನ್ ಲೈನ್ ಕ್ಲಾಸ್ ಗಾಗಿ ಕ್ರಿಯೇಟ್ ಮಾಡಿದ ಶಾಲಾ ವಾಟ್ಸ್ಯಾಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಶೇರ್ ಮಾಡಿದ ಶಿಕ್ಷಕ ಖಾಕಿ ವಶಕ್ಕೆ..!!

- Advertisement -G L Acharya panikkar
- Advertisement -

ಚೆನ್ನೈ: ಆನ್ ಲೈನ್ ಕ್ಲಾಸ್ ಗಾಗಿ ಕ್ರಿಯೇಟ್ ಮಾಡಲಾಗಿರುವ ವಾಟ್ಸ್ಯಾಪ್ ಗ್ರೂಪ್ ನಲ್ಲಿ ಖಾಸಗಿ ಶಾಲಾ ಶಿಕ್ಷಕನೊಬ್ಬ ಅಶ್ಲೀಲ ವಿಡಿಯೋ ಶೇರ್ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಗಣಿತ ಶಿಕ್ಷಕ ಮತಿವಣ್ಣನ್ ಎನ್ನಲಾಗಿದೆ.

vtv vitla

ಶುಕ್ರವಾರ ರಾತ್ರಿ ವೇಳೆ ಶಿಕ್ಷಕ ಮತಿವಣ್ಣನ್ ಅಶ್ಲೀಲ ವಿಡಿಯೋವನ್ನು ಶಾಲಾ ಗ್ರೂಪ್ ಗೆ ಶೇರ್ ಮಾಡಿದ್ದು, ಈ ವಿಡಿಯೋವನ್ನು ಕಂಡ ತಕ್ಷಣವೇ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಶಾಲಾ ಆಂತರಿಕ ಮಂಡಳಿ ಶಿಕ್ಷಕನನ್ನು ಕರೆದು ವಿಚಾರಣೆ ನಡೆಸಿದಾಗ, ಶುಕ್ರವಾರ ರಾತ್ರಿ ಮದ್ಯಪಾನ ಮಾಡಿದ್ದೆ. ಹೀಗಾಗಿ ನಾನೇನು ಮಾಡಿದೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದ್ದು, ಪೋಕ್ಸೋ ಹಾಗೂ ಐಟಿ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

vtv vitla
vtv vitla
vtv vitla
- Advertisement -

Related news

error: Content is protected !!