Monday, April 29, 2024
spot_imgspot_img
spot_imgspot_img

ಆರ್. ಕೆ. ಆರ್ಟ್ಸ್ ನೃತ್ಯ ಸಂಭ್ರಮ – 2023 – ರಾಧಾಕೃಷ್ಣ ಎರುಂಬು

- Advertisement -G L Acharya panikkar
- Advertisement -

ಸಾಧನೆಗೆ ಸಣ್ಣ ಸಣ್ಣ ಪ್ರಯತ್ನಗಳೇ ಮೆಟ್ಟಿಲುಗಳು”. ಸದಾಶಯದಿಂದ ಹಗಲಿರುಳಿನ ಶ್ರಮದಿಂದ ಬೆಳಕು ಕಂಡಿರುವುದು ಇಂದು ವಿಟ್ಲ ಪರಿಸರದ ಕಲಾವಿದರ ಅಚ್ಚು ಮೆಚ್ಚಿನ ಆರ್. ಕೆ ಆರ್ಟ್ಸ್ ವಿಟ್ಲ. ನಿರ್ದೇಶಕರಾದ ಕೃಷ್ಣಯ್ಯ. ಕೆ ವಿಟ್ಲ ಅರಮನೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜೇಶ್ ವಿಟ್ಲ ರವರ ಕನಸಿನ ಗಿಡವಿಂದು ರೆಂಬೆ ಕೊಂಬೆಗಳನ್ನು ಸೇರಿಸಿಕೊಂಡು ಹೆಮ್ಮರವಾಗಿದೆ.

ಆರ್. ಕೆ ಆರ್ಟ್ಸ್ ಕೇವಲ ಬಣ್ಣಗಾರಿಕೆ, ರಂಗ ಪ್ರಸಾಧನವಲ್ಲದೆ ಆರ್. ಕೆ.ಕಲಾ ಸಂಸ್ಥೆಗಳಡಿ ಸಾವಿರಾರು ವಿದ್ಯಾರ್ಥಿ ಸಮೂಹವನ್ನು ಸೃಷ್ಟಿಸಿ ಸಂಸ್ಕಾರಯುತ ಕುಣಿತಭಜನೆ, ಶಾಸ್ತ್ರೀಯ ನೃತ್ಯ, ಫಿಲಂ ಡಾನ್ಸ್, ಜನಪದ ನೃತ್ಯ, ಯಕ್ಷಗಾನ ಹಿಮ್ಮೇಳ ಮುಮ್ಮೇಳ ಗಳನ್ನು ಕಲಿಸಿ ಸಮಾಜಕ್ಕೆ ನೀಡುವ ಕಲಾ ಸಂಸ್ಥೆಯಾಗಿದೆ. ವಿಟ್ಲ, ಅಡ್ಯನಡ್ಕ, ಪುಣಚ, ಮಂಚಿ, ಕುಡ್ತಮುಗೇರು, ಪುತ್ತೂರು, ಕೊಡ್ಮಾನ್, ಕನ್ಯಾನ ಮೊದಲಾದೆಡೆ ತರಗತಿಗಳನ್ನು ನಡೆಸುತ್ತಾ ಬರುತ್ತಿದೆ. ಶಾಲಾ ವಾರ್ಷಿಕೋತ್ಸವಗಳ ನೃತ್ಯ ಕಲಿಕೆ, ವರ್ಣ ಮತ್ತು ರಂಗಲಂಕಾರ ಜವಾಬ್ಧಾರಿ ವಹಿಸುತಿದೆ.
ಪ್ರತಿವರ್ಷ ಜನವರಿ 14 ರಿಂದ 21ರ ವರೆಗೆ ಮಹಾತೋಭಾರ ಪಂಚಲಿಂಗೇಶ್ವರನ ಜಾತ್ರಾ ಸಂಭ್ರಮ.

ಪ್ರತಿ ವರ್ಷ ಕೆರೆ ಆಯನದಂದು ಆರ್. ಕೆ.ಆರ್ಟ್ಸ್ ಚಿಣ್ಣರ ಮನೆ ಯ ಸಾಂಸ್ಕೃತಿಕ ಕಲರವ ಜನ ಸಾಗರ ಸೇರಿಸುವ ಅಭೂತ ಪೂರ್ವ ಸಂಗಮ. ಈ ವರ್ಷವೂ ಜನವರಿ 19ರಂದು ಸಂಜೆ ಗಂಟೆ 7.00ಕ್ಕೆ ಆರ್. ಕೆ. ಆರ್ಟ್ಸ್ ಚಿಣ್ಣರ ಮನೆ ಸಾಧರ ಪಡಿಸುವ “ನೃತ್ಯ ಸಂಭ್ರಮ -2023” ವರ್ಷಕ್ಕಿಂತ ಭಿನ್ನವಾಗಿ ಮೂಡಿಬರಲಿದೆ. ನುರಿತ ನೃತ್ಯ ಪಟುಗಳಿಂದ ಕ್ರಿಯಾಶೀಲ ನೃತ್ಯ, ರೂಪಕ, ಸಂಸ್ಥೆಯ ಯಕ್ಷಪಟುಗಳಿಂದ ನಾಟ್ಯಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆಯವರ ನಿರ್ದೇಶನದಲ್ಲಿ ಯಕ್ಷ ನಾಟ್ಯ ವೈಭವ “ಶ್ರೀ ಕೃಷ್ಣo ವಂದೇ ಜಗದ್ಗುರುo” ಹಾಗೂ ವಿಶೇಷ ಆಕರ್ಷಣೆಯಲ್ಲಿ ಜೂನಿಯರ್ ರಾಜಕುಮಾರ್ ಖ್ಯಾತಿಯ ಸ್ವರ ಕಂಠೀರವ, ಸ್ವರ ತಪಸ್ವಿ ಜಗದೀಶ್ ಶಿವಪುರ ರವರಿಂದ “ರಾಜಕುಮಾರ್ ಸವಿನೆನಪಿನ ಗೀತೆಗಳು” ಪ್ರಸ್ತುತ ವಾಗಲಿದೆ. ಅಲ್ಲದೆ ಕಲಾ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನವಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮನ್ನೆಲ್ಲ ಪ್ರೀತಿಪೂರ್ವಕವಾಗಿ ಆಮಂತ್ರಿಸುತ್ತಿದೆ ಆರ್. ಕೆ ಕಲಾ ಸಂಸ್ಥೆಗಳು ವಿಟ್ಲ.

- Advertisement -

Related news

error: Content is protected !!