Monday, June 22, 2026
spot_imgspot_img
spot_imgspot_img

ಆಸ್ತಿ ಹಾಗೂ ಚಿನ್ನಾಭರಣ ವಿಚಾರಕ್ಕೆ ಸ್ವಂತ ತಮ್ಮನಿಗೆ ಚಾಕು ಇರಿದು ಪರಾರಿಯಾದ ಅಣ್ಣ; ತಂದೆಯಿಂದ ಮಗನ ವಿರುದ್ಧ ದೂರು

- Advertisement -
- Advertisement -

ಹುಬ್ಬಳ್ಳಿ: ಆಸ್ತಿ ಮತ್ತು ಬಂಗಾರದ ವಿಚಾರವಾಗಿ ಸ್ವಂತ ತಮ್ಮನಿಗೆ ಚಾಕು ಇರಿದು ಅಣ್ಣ ಪರಾರಿಯಾಗಿರುವಂತಹ ಘಟನೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದಿದೆ. ಸಂಜಯ್ ಬಾಕಳೆ ಎಂಬುವವನಿಂದ ಸಾಗರ್ ಬಾಕಳೆ ಎಂಬುವವನಿಗೆ ಚಾಕು ಇರಿಯಲಾಗಿದೆ.

ಸಂಜಯ್ ಹಾಗೂ ಸಾಗರ್ ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿಗಳು.

ಹಬ್ಬದ ಹಿನ್ನಲೆ ಪೂಜೆಗೆ ಬಂಗಾರ ಕೇಳಿದ್ದಕ್ಕೆ ಚಾಕು ಇರಿಯಲಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಅಣ್ಣ ತಮ್ಮರ ನಡುವೆ ಆಸ್ತಿ ವಿಚಾರವಾಗಿ ಹಲವಾರು ವರ್ಷಗಳಿಂದ ಕುಟುಂಬದಲ್ಲಿ ಕಲಹವಿತ್ತು. ಅಣ್ಣ ಸಂಜಯ್ ಹಾಗೂ ಪತ್ನಿ ಸೋನಾಲಿಯಿಂದ ಆಸ್ತಿ ವಿಚಾರವಾಗಿ ನಿರಂತರ ಕಲಹ ನಡೆಯುತಿತ್ತು. ಗಂಭೀರವಾಗಿ ಗಾಯಗೊಂಡ ತಮ್ಮ ಸಾಗರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯ ಮಗ ಸಂಜಯ್ ವಿರುದ್ಧ ತಂದೆ ಗಣೇಶ ಬಾಕಳೆಯಿಂದ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

- Advertisement -

Related news

error: Content is protected !!