Tuesday, April 30, 2024
spot_imgspot_img
spot_imgspot_img

ಕಾಂಕ್ರೀಟ್ ಬ್ಯಾರಿಕೇಡ್‌ನೊಳಗೆ ಸಿಲುಕಿಕೊಂಡ ಆನೆ; ರಕ್ಷಣೆಗೆ ಹರಸಾಹಸ ಪಟ್ಟರು!….

- Advertisement -G L Acharya panikkar
- Advertisement -
vtv vitla

ಸುಂಟಿಕೊಪ್ಪ: ನೀರು ಕುಡಿಯಲು ಬಂದ ಆನೆಯೊಂದು ಅರಣ್ಯ ಇಲಾಖೆ ಅಳವಡಿಸಿದ್ದ ಕಾಂಕ್ರೀಟ್ ಬ್ಯಾರಿಕೇಡ್‌ನೊಳಗೆ ಸಿಕ್ಕಿಹಾಕಿಕೊಂಡ ಘಟನೆ ಸುಂಟಿಕೊಪ್ಪ ಸಮೀಪದ ತೊಂಡೂರು ಬಳಿ ಶುಕ್ರವಾರ ಮಧ್ಯರಾತ್ರಿ ನಸುಕಿನಲ್ಲಿ ನಡೆದಿದ್ದು, ಇಲಾಖೆಯವರು ವಿಶೇಷ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಅಟ್ಟಿದ್ದಾರೆ.

ರಾತ್ರಿ ಎರಡು ಮಣ್ಣು ತೆಗೆಯುವ ಯಂತ್ರ, ಹಿಟಾಚಿ, ಸಾಕಾನೆ ವಿಕ್ರಂನ ಸಹಾಯದಿಂದ ಕಾರ್ಯಾಚರಣೆ ಆರಂಭಿಸಲಾಯಿತು. ಆನೆಯ ಮೈಗೆ ಸೋಪು ನೀರು, ಎಣ್ಣೆ ಹಾಕುವ ಮೂಲಕ ಬ್ಯಾರಿಕೇಡ್‌ನಿಂದ ಹೊರಗೆ ತರಲಾಯಿತು. ಶನಿವಾರ ನಸುಕಿನಲ್ಲಿ ಕಾರ್ಯಾಚರಣೆ ಮುಗಿಯಿತು’ ಎಂದು ಶಿವರಾಮ್ ಮಾಹಿತಿ ನೀಡಿದರು. ಆನೆಗೆ ಹೆಚ್ಚಿನ ಗಾಯಗಳಾಗದಂತೆ ಬಹಳ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಯಿತು. ಸಮೀಪದಲ್ಲೇ, 3-4 ಆನೆಗಳು ಘೀಳಿಡುತ್ತಿದ್ದ ಶಬ್ದ ಕೇಳಿಸುತ್ತಿತ್ತು. ಈ ಎಲ್ಲ ಅಪಾಯದ ನಡುವೆ ಕಾಡಾನೆ ರಕ್ಷಿಸುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾದರು. ನಾಲೈದು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಕಾಡಾನೆ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದೆ. ಸ್ವಲ್ಪ ದೂರದವರೆಗೆ ಅಟ್ಟಿಸಿಕೊಂಡು ಬಂದಿದೆ. ಸಿಬ್ಬಂದಿ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಅಪಾಯದ ಸೂಚನೆ ಅರಿತ ಸಿಬ್ಬಂದಿ ಕಾರ್ಯಾಚಾರಣೆ ನಡೆಸಿ ಹೊರ ಮಾಡಿದರು.

- Advertisement -

Related news

error: Content is protected !!