Friday, April 26, 2024
spot_imgspot_img
spot_imgspot_img

ಆ. 28 ರಂದು ತುಳುನಾಡ ಜವನೆರ್ ಬೆಂಗಳೂರು (ರಿ) ಇದರ ವತಿಯಿಂದ ಅಸ್ಟೆಮಿದ ಐಸಿರ ಮೊಸರು ಕುಡಿಕೆ ಉತ್ಸವ 2022

- Advertisement -G L Acharya panikkar
- Advertisement -

ಬೆಂಗಳೂರು: ತುಳುನಾಡ ಜವನೆರ್ ಬೆಂಗಳೂರು (ರಿ) ಇದರ ವತಿಯಿಂದ ಅಸ್ಟೆಮಿದ ಐಸಿರ ಮೊಸರು ಕುಡಿಕೆ ಉತ್ಸವ ೨೦೨೨ ಇದೇ ಬರುವ ಆಗಸ್ಟ್ ೨೮ ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಬೆಂಗಳೂರಿನ ಬಂಟರ ಸಂಘ ವಿಜಯನಗರದಲ್ಲಿ ನಡೆಯಲಿದೆ.

ಅಸ್ಟೆಮಿದ ಐಸಿರದ ಕಾರ್ಯಕ್ರಮದಲ್ಲಿ ಬೆಳಗ್ಗೆ

08.30 ರಿಂದ 09.30: ಭಜನಾ ಸಂಕೀರ್ತನೆ
09.3 ರಿಂದ 10.00: ಹುಲಿವೇಷ, ಕಂಗೀಲು, ಚೆಂಡೆ ನೃತ್ಯ,
0.00 ರಿಂದ 10.30: ಕಾರ್ಯಕ್ರಮದ ಉದ್ಘಾಟನೆ
10.30 ರಿಂದ 2.30: ನರಕಾಸುರ ಮೋಕ್ಷ ತುಳು ಯಕ್ಷಗಾನ ಬಯಲಾಟ
12.30 ರಿಂದ ಊಟೋಪಾಚಾರ ನಡೆಯಲಿದೆ.

ಮಧ್ಯಾಹ್ನ ನಂತರ ಕಾರ್ಯಕ್ರಮದಲ್ಲಿ
01.30 ರಿಂದ 03.30: ಐಸಿದ ಫ್ಯಾಶನ್ ಶೋ,
03.30 ರಿಂದ 04.30: ಮೊಸರು ಕುಡಿಕೆ ಉತ್ಸವ
4.30 ರಿಂದ 06.30 ಸಭೆ ಸನ್ಮಾನ
06.30 ರಿಂದ 07.00: ಮಹಿಷಮರ್ಧಿನಿ ರೂಪಕ
07.00 ರಿಂದ 09.00: ತುಳು ನಾಟಕ ನಿತ್ಯೆ ಬನ್ನಗ
09: 00 ರಿಂದ ರಾತ್ರಿಯ ಊಟೋಪಾಚಾರ ನಡೆಯಲಿದೆ.

ಮಕರಶ್ರೀ ಭಟನಾ ಮಂಡಲ ವಿಜಯನಗರ , ಶ್ರೀ ವಿನಾಯಕ ಭಜನಾ ಮಂಡಳಿ ದಾಸರಹಳ್ಳಿ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಹೆಗ್ಡೆ (ಬಾಲಾಜಿ ಅಯ್ಯಪ್ಪ ಶಿಜರ ಕಾರ್ಕಳ), ಮುರಳೀಧರ ಹೆಗ್ಡೆ (ಅಧ್ಯಕ್ಷರು, ಬಂಟರ ಸಂಘ ಬೆಂಗಳೂರು), ಲೀನಾ ಸವರ್ಣ (ಸಹಾಯಕ ಪೊಲೀಸ್‌ ಕಮಿಷನರ್ ಬೆಂಗಳೂರು) ಜಯಪ್ರಸಾದ್‌ ಶೆಟ್ಟಿ ಇರ್ಮಾಡಿ (ಉದ್ಯಮಿ ಪ್ರಸಾದ್ ಫಾರ್ಮ್ಸ್), ಆರ್ ಕೆ ಭಟ್ (ಉದ್ಯಮಿ, ತುಳು ಸಂಘಟಕರು ಬೆಂಗಳೂರು), ಗೋವಿಂದ ಬಾಬು ಪೂಜಾರಿ (ಗೌರವ ಸಲಹೆಗಾರರು), ಪುರುಷೋತ್ತಮ ಜೇಂಡ್ಲ (ಗೌರವ ಸಲಹೆಗಾರರು) ದೀಪಕ್ ಶೆಟ್ಟಿ (ಗೌರವ ಸಲಹೆಗಾರರು) ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಬಂಜಾರ ಪ್ರಕಾಶ್‌ ಶೆಟ್ಟಿ (ಉದ್ಯಮಿ MRG ಗ್ರೂಪ್) ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಸುನಿಲ್‌ ಕುಮಾರ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಶಾಸಕ ಹರೀಶ್ ಪೂಂಜಾ, BBMP ನಿಕಟಪೂರ್ವ ಸದಸ್ಯ ಉಮೇಶ್‌ ಶೆಟ್ಟಿ, ಉದ್ಯಮಿ, ತುಳುಕೂಟ ಗುಜರಾತ್‌ನ ಅಧ್ಯಕ್ಷ ಬರೋಡ ಶಶಿಧರ್ ಶೆಟ್ಟಿ, ಟಿವಿ ವಿಕ್ರಮದ ಮುಖ್ಯಸ್ಥ ಮಹೇಶ್‌ ವಿಕ್ರಮ್ ಹೆಗ್ಡೆ, ಉದ್ಯಮಿ ಸಮಾಜ ಸೇವಕ‌ ಗುರ್ಮೆ ಸುರೇಶ್ ಶೆಟ್ಟಿ, ಉತ್ಸವ ಸಮಿತಿಯ ಗೌರವಾಧ್ಯಕ್ಷ‌ ಉತ್ತಮ್ ಶೆಟ್ಟ ಬೇಂಗದಡಿ ಆಗಮಿಸಲಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಗ್ಮಿ ಡಾ. ಅರುಣ್ ಉಳ್ಳಾಲ್ ಭಾಷಣ ಮಾಡಲಿದ್ದಾರೆ.

ಈ ವೇಳೆ ತುಳುನಾಡ ಐಸಿರ ಸನ್ಮಾನ ನಡೆಯಲಿದೆ. ಪದ್ಯಶ್ರೀ ಹರೇಕಳ ಹಾಜಬ್ಬ (ಶಿಕ್ಷಣ ಕ್ಷೇತ್ರ), ಪದ್ಮಶ್ರೀ ಮಹಾಲಿಂಗ ನಾಯ್ಕ ಬಿಟ್ಸ್ (ಕೃಷಿ ಕ್ಷೇತ್ರ), ಶಾರದಾ ಮೊಗವೀರ ಮಲ್ಪೆ (ಸಮಾಜಸೇವಾ ಕ್ಷೇತ್ರ) , ಮಮತಾ ಪೂಜಾರಿ (ಕ್ರೀಡಾ ಕ್ಷೇತ್ರ) , ಕಲ್ಚಾರ್‌‌ ಲಕ್ಷ್ಮೀ ನಾರಾಯಣ ಭಟ್ (ಕಲಾ ಕ್ಷೇತ್ರ) ಇವರಿಗೆ ಸನ್ಮಾನ ನಡೆಯಲಿದೆ. ಈ ವೇಳೆ ವಿವಿಧ ಸ್ಪರ್ಧೆಗಳು ನಡೆಯಲಿದೆ.

- Advertisement -

Related news

error: Content is protected !!