
ಇಟಲಿ ಪ್ರವಾಸದಲ್ಲಿ ಇರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಯುದ್ಧಗಳಲ್ಲಿ ಇಟಲಿಯಲ್ಲಿ ಹೋರಾಡಿದ ಭಾರತೀಯ ಸೈನಿಕರ ಸ್ಮರಣಾರ್ಥ ಸಿಖ್ ಸಮುದಾಯ ಮತ್ತು ವಿವಿಧ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು. ಮೊದಲ ವಿಶ್ವ ಯುದ್ಧ ಮತ್ತು ಎರಡನೇ ವಿಶ್ವ ಯುದ್ಧದಲ್ಲಿ ಇಟಲಿಯಲ್ಲಿ ಹೋರಾಡಿದ ಸಿಖ್ ಸಮುದಾಯ ಮತ್ತು ಇತರೆ ಸಂಸ್ಥೆಗಳನ್ನೊಳಗೊಂಡ ವಿವಿಧ ಸಂಘಟನೆಗಳ ಸಮುದಾಯದ ಪ್ರತಿನಿಧಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಮಾಡಿ ಸಂವಾದ ನಡೆಸಿದರು. ಈ ಯುದ್ಧಗಳಲ್ಲಿ ಭಾರತೀಯ ಸೈನಿಕರ ಶೌರ್ಯಕ್ಕೆ ಪ್ರಧಾನಮಂತ್ರಿ ಗೌರವ ಸಮರ್ಪಿಸಿದರು.

ಇಟಲಿಯ ಕೃಷ್ಣ ಪ್ರಜ್ಞಾ ಸಭೆಯ [ಇಸ್ಕಾನ್] ಪ್ರತಿನಿಧಿಗಳನ್ನು ಭೇಟಿ ಮಾಡಿದ ನರೇಂದ್ರ ಮೋದಿ ಕೃಷ್ಣ ಪ್ರಜ್ಞಾ ಸಭೆ [ಇಸ್ಕಾನ್] ನ ಪ್ರತಿನಿಧಿಗಳು ಒಳಗೊಂಡಂತೆ ವಿವಿಧ ಸಂಘಟನೆಗಳ ಪ್ರಮುಖರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಇಟಲಿಯಲ್ಲಿ ಭಗವದ್ಗೀತೆಯ ಸಾರವನ್ನು ಪಸರಿಸುವುದು ಸೇರಿದಂತೆ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಅವರ ಕೊಡುಗೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.
ಇಟಲಿಯ ಸನಾತನ ಧರ್ಮ ಸಂಘ ಸೇರಿದಂತೆ ವಿವಿಧ ಹಿಂದೂ ಒಕ್ಕೂಟದ ಪ್ರತಿನಿಧಿಗಳನ್ನು ನರೇಂದ್ರ ಮೋದಿ ಭೇಟಿ ಮಾಡಿ ಸಂವಾದ ನಡೆಸಿದರು. ಇಟಲಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುವಲ್ಲಿ ಅವರು ವಹಿಸಿದ ಪಾತ್ರವನ್ನು ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ರನ್ನು ಭೇಟಿಯಾದ ಪ್ರಧಾನಿ ಮೋದಿ
ರೋಮ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು ವ್ಯಾಟಿಕನ್ ನಗರಕ್ಕೆ ತೆರಳಿ, ಅಲ್ಲಿ ಕ್ರೈಸ್ತರ ಪರಮೋಚ್ಛ ಧರ್ಮಗುರು (ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ) ಪೋಪ್ ಫ್ರಾನ್ಸಿಸ್ರನ್ನು ಭೇಟಿಯಾದರು. ಹಾಗೇ, ಭಾರತಕ್ಕೆ ಬರುವಂತೆ ಅವರಿಗೆ ಆಮಂತ್ರಣ ನೀಡಿದರು. ಇವರಿಬ್ಬರ ಮಧ್ಯೆ 20 ನಿಮಿಷಗಳ ಮಾತುಕತೆ ನಿಗದಿಯಾಗಿತ್ತು. ಆದರೆ ಸುಮಾರು 1 ತಾಸು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.











