Monday, April 29, 2024
spot_imgspot_img
spot_imgspot_img

ಇಬ್ಬರು ಯುವತಿಯರನ್ನು ಕೂರಿಸಿಕೊಂಡು ಬೈಕ್ ವೀಲಿಂಗ್ ಮಾಡಿದ ಯುವಕ: ಕೇಸ್ ದಾಖಲು

- Advertisement -G L Acharya panikkar
- Advertisement -

ಯುವಕನೊಬ್ಬ ಬೈಕ್ ನಲ್ಲಿ ಇಬ್ಬರು ಯುವತಿಯನ್ನು ಕೂರಿಸಿಕೊಂಡು ಬೈಕ್ ವೀಲಿಂಗ್ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಮುಂಬೈ ಟ್ರಾಫಿಕ್ ಪೊಲೀಸ್ ಈ ಬಗ್ಗೆ ಬಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವೇಳೆ ಬೈಕ್‌ನಲ್ಲಿದ್ದ ಮೂವರು ಹೆಲ್ಮಟ್ ಧರಿಸಿರಲಿಲ್ಲ. ಅಲ್ಲದೇ ಮುಂದೆ ಕುಳಿತ ಯುವತಿ, ಯುವಕನನ್ನು ತಬ್ಬಿಕೊಂಡು  ಯಾವುದೇ ಮುಂಜಾಗ್ರತೆ ಕ್ರಮವಿಲ್ಲದೆ ಹೆದ್ದಾರಿಯಲ್ಲಿ ಬೈಕ್ ಅನ್ನು ವೀಲಿಂಗ್ ಮಾಡಿದ್ದಾರೆ. 


ಬೈಕ್ ವೀಲಿಂಗ್ ಮಾಡಿದ ವಿಡಿಯೋವನ್ನು ಮುಂಬೈನ ಪಾಥ್‌ಹೋಲ್ ವಾರಿಯರ್ಸ್ ಫೌಂಡೇಶನ್ ತನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಈ ಘಟನೆ ಬಗ್ಗೆ ರಿಯಾಕ್ಟ್ ಮಾಡಿರುವ ಮುಂಬೈ ಟ್ರಾಫಿಕ್ ಪೊಲೀಸ್ ಈ ವಿಡಿಯೋದಲ್ಲಿರುವವರು ನಿಮಗೆ ಗೊತ್ತಿದ್ದರೆ ನಮಗೆ ತಿಳಿಸಿ ಎಂದು ಟ್ವಿಟ್ ಮಾಡಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!