Friday, May 3, 2024
spot_imgspot_img
spot_imgspot_img

ಮದುವೆ ವಾರ್ಷಿಕೋತ್ಸವಕ್ಕೆ ಗಿಫ್ಟ್‌ ಕೊಡಲಿಲ್ಲವೆಂದು ಗಂಡನಿಗೆ ಚಾಕು ಇರಿದ ಪತ್ನಿ

- Advertisement -G L Acharya panikkar
- Advertisement -

ಮದುವೆ ವಾರ್ಷಿಕೋತ್ಸವಕ್ಕೆ ಉಡುಗೊರೆ ಕೊಡಲಿಲ್ಲ ಎಂದು ಕೋಪ ಮಾಡಿಕೊಂಡು ಮಹಿಳೆಯೊಬ್ಬಳು ತನ್ನ ಗಂಡನಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬೆಳ್ಳಂದೂರಿನಲ್ಲಿ ಮದುವೆ ವಾರ್ಷಿಕೋತ್ಸವದ ದಿನ ಮಧ್ಯರಾತ್ರಿ 1:30 ರ ಹೊತ್ತಿಗೆ ಗಂಡನಿಗೆ ಆತನ ಹೆಂಡತಿ ಚಾಕುವಿನಿಂದ ಇರಿದಿದ್ದಾಳೆ.

ಮದುವೆ ವಾರ್ಷಿಕೋತ್ಸವದ ದಿನ ಗಂಡ ನಿದ್ದೆಗೆ ಜಾರಿದ್ದ. ಈ ವೇಳೆ ಅಡುಗೆ ಮನೆಯಿಂದ ಚಾಕು ತಂದು ಪತ್ನಿ ಇರಿದಿದ್ದು, ಚಾಕುವಿನಿಂದ ಇರಿದ ಹಿನ್ನೆಲೆ ಗಂಡನ ಕೈಗೆ ರಕ್ತಗಾಯವಾಗಿದೆ. ಸ್ಥಳೀಯರ ಸಹಾಯದಿಂದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಡ-ಹೆಂಡತಿಗೆ ಪೊಲೀಸರು ಕೌನ್ಸೆಲಿಂಗ್ ನಡೆಸಿದ್ದಾರೆ. ತನಿಖೆ ವೇಳೆ ಮೊದಲ ಬಾರಿಗೆ ಗಿಫ್ಟ್ ನೀಡಿಲ್ಲ ಎಂದು ಮಹಿಳೆ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.

- Advertisement -

Related news

error: Content is protected !!