Monday, April 29, 2024
spot_imgspot_img
spot_imgspot_img

ಇರಾನ್‌ ಮೂಲದ ಮಹಿಳೆ ಮೇಲೆ ಆದಿಲ್‌ ಖಾನ್‌ ಅತ್ಯಾಚಾರ; ಮೈಸೂರು ಎಫ್‌ಐಆರ್‌ ದಾಖಲು..!

- Advertisement -G L Acharya panikkar
- Advertisement -
vtv vitla

ಬಾಲಿವುಡ್ ನಟಿ ರಾಖಿ ಸಾವಂತ್ ದಾಖಲಿಸಿದ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಇರಾನ್ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ಮೈಸೂರಿನಲ್ಲಿ ದಾಖಲಾಗಿದೆ.

ಐದು ವರ್ಷಗಳ ಹಿಂದೆ ಫಾರ್ಮಸಿ ಓದಲು ಬಂದಿದ್ದ ಮಹಿಳೆಯನ್ನು ಆದಿಲ್‌ ಖಾನ್‌ ಪರಿಚಯ ಮಾಡಿಕೊಂಡಿದ್ದ. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ವಿ.ವಿ ಪುರಂ ವಸತಿಯಲ್ಲಿ ಅತ್ಯಾಚಾರ ಎಸಗಿದ್ದ. ಬಳಿಕ ಮದುವೆಯಾಗುವಂತೆ ಒತ್ತಾಯಿಸಿದಾಗ ಬೆದರಿಕೆಯೊಡ್ಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇರಾನ್ ಮೂಲದ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೈಸೂರಿನ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಖಿ ಸಾವಂತ್ ತನಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಈಗಾಗಲೇ ಆದಿಲ್ ದುರಾನಿ ಬಂಧನಕ್ಕೆ ಒಳಗಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಇದೀಗ ಆದಿಲ್ ದುರಾನಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಇದೇ ವೇಳೆ ಆದಿಲ್ ದುರಾನಿ ತನ್ನನ್ನು ಮದುವೆ ಆಗಿದ್ದು, ಹಣಕ್ಕಾಗಿ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ರಾಖಿ ಸಾವಂತ್ ದೂರು ನೀಡಿದ್ದರು.

- Advertisement -

Related news

error: Content is protected !!