Sunday, October 25, 2026
spot_imgspot_img
spot_imgspot_img

ಸ್ಟಿಂಗ್ ಆಪರೇಷನ್ ಸೂತ್ರಧಾರಿಯನ್ನು ಮೊದಲು ಬಂಧಿಸಿ: ಸಚಿವ ಪ್ರಹ್ಲಾದ್ ಜೋಶಿ ಆಗ್ರಹ

- Advertisement -
- Advertisement -

ಹುಬ್ಬಳ್ಳಿ: ಸ್ಟಿಂಗ್ ಆಪರೇಷನ್ ಸೂತ್ರಧಾರಿಯನ್ನು ಮೊದಲು ಬಂಧಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬರ ನೀತಿ ಅನುಸರಿಸುತ್ತಿದೆ. ವೀಡಿಯೋ ಶೇರ್ ಮಾಡಿದವರನ್ನು ಬಂಧಿಸಿದ್ದಾರೆ. ಇನ್ನೂ ಕೆಲವರನ್ನು ಬಂಧಿಸುವ ಪ್ರಯತ್ನ ನಡೆದಿದೆ. ಸ್ಟಿಂಗ್ ಹೆಸರಲ್ಲಿ ಸಿದ್ದರಾಮಯ್ಯರಿಗೆ ಅಪಮಾನ ಮಾಡಲಾಗಿದೆ. ಇದರ ಮೂಲ ಕಾರಣ ನಮ್ಮ ಪಕ್ಷದವರೇ ಅಂತ ಯತೀಂದ್ರ ಹೇಳಿದ್ದಾರೆ.

ಕಾಂಗ್ರೆಸ್ ಮಹಿಳಾ ಮುಖಂಡರೊಬ್ಬರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಬೇರೆಯವರನ್ನು ಅರೆಸ್ಟ್ ಮಾಡುತ್ತಿದ್ದಾರೆ. ಇದು ಇಬ್ಬಗೆಯ ನೀತಿ ತೋರಿಸುತ್ತಿದೆ. ಸಿದ್ದರಾಮಯ್ಯರನ್ನು ತೇಜೋವಧೆ ಮಾಡಲು ಪ್ಲ್ಯಾನ್ ಮಾಡಿದವರು ಯಾರು ಎಂಬುದನ್ನು ಪತ್ತೆಹಚ್ಚಿ ಎಂದು ಒತ್ತಾಯಿಸಿದರು.

ವೀಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆ ಯೂ ಟರ್ನ್ ವಿಚಾರವಾಗಿ ಪ್ರತಿಕ್ರಿಯಿಸಿ, ಆ ಮಹಿಳೆಗೆ ಇದೀಗ ಏನು ಹೇಳಿಕೊಟ್ಟಿದ್ದಾರೋ ಅದನ್ನು ಹೇಳಿರುತ್ತಾಳೆ. ಬೋಗಸ್ ಹೊಸ ಕಥೆ ಕಟ್ಟಿ ಮುಚ್ಚಿಹಾಕಲು ಸಾಧ್ಯವಿಲ್ಲ. ಈ ಹಿಂದೆ ಮಹಿಳೆ ಯಾಕೆ ಹಾಗೆ ಹೇಳಿದಳು? ಇದೀಗ ಯಾಕೆ ಹೀಗೆ ಹೇಳುತ್ತಿದ್ದಾಳೆ ಇದೆಲ್ಲವೂ ತನಿಖೆ ಆಗಬೇಕು ಎಂದರು.

ಆರ್‌ಎಸ್‌ಎಸ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಕೆಲವೆಡೆ ಅನುಮತಿ ನೀಡಿಲ್ಲ. ನೀತಿ ಸಂಹಿತೆಯ ನೆಪ ಹೇಳಲಾಗಿದೆ. ಚುನಾವಣೆ ನೀತಿ ಸಂಹಿತೆ ಇದ್ದರೂ ಹುಬ್ಬಳ್ಳಿಯಲ್ಲಿ ಅನುಮತಿ ನೀಡಿದ್ದಾರೆ. 70 ವರ್ಷದಿಂದ ದೇಶದಲ್ಲಿ ಪಥಸಂಚಲನ ನಡೆದಿವೆ. ಸಹಿಷ್ಣುತೆ ಪಾಠ ಮಾಡೋರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕೋಡ್ ಆಫ್ ಕಂಡೆಕ್ಟ್ ಅಂತ ಅನೇಕ ಕಡೆ ಕಾರಣ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಕೂಡಾ ಇವತ್ತು ಪಥಸಂಚಲನ ಇದೆ. ಇಲ್ಲಿ ಚುನಾವಣೆ ನಡೆದಿದೆ. ಇಲ್ಲಿನ ಪೊಲೀಸರು ಅನುಮತಿ ನೀಡಿದ್ದಾರೆ. ವಿಷಯ ಡೈವರ್ಟ್ ಮಾಡಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಕಿಡಿಕಾರಿದರು.

ಸ್ಟಿಂಗ್ ಹಿಂದೆ ನಮ್ಮ ಪಕ್ಷದವರೇ ಇದ್ದಾರೆ ಅಂತ ಯತೀಂದ್ರ ಹೇಳಿದ್ದು, ಇದರಿಂದ ಕಾಂಗ್ರೆಸ್‌ನಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿದೆ. ಜ್ವಾಲಾಮುಖಿ ಕೆಳಗೆ ಕುಳಿತ ಸ್ಥಿತಿಯಲ್ಲಿ ಕಾಂಗ್ರೆಸ್‌ನವರಿದ್ದಾರೆ. ಹೀಗಾಗಿ ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಸಿಎಂ ಮೊದಲ ಭಾಷಣ ಏನು ಮಾಡಿದ್ರು ಅಂತ ನೆನಪಿಸಿಕೊಳ್ಳಲಿ. ಸೋಲಿನ ಸೆಂಚುರಿ ಬಾರಿಸುತ್ತಿರೋದು ರಾಹುಲ್ ಗಾಂಧಿ. ಅವರು ಎಲ್ಲಿಗೆ ಹೋಗಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಸೀಕ್ರೆಟ್ ಆಗಿ ಎಲ್ಲಿ ಹೋಗುತ್ತಿದ್ದಾರೆ, ಯಾರನ್ನು ಭೇಟಿ ಮಾಡ್ತಿದ್ದಾರೆ? ಇದನ್ನೆಲ್ಲಾ ಅವರು ಯಾಕೆ ಮುಚ್ಚಿಡುತ್ತಿದ್ದಾರೆ ಎಂದು ಪ್ರಶ್ನಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!