Saturday, April 27, 2024
spot_imgspot_img
spot_imgspot_img

ಇಲಿಯ ಕಾಟದಿಂದ ಶಸ್ತ್ರಚಿಕಿತ್ಸೆಗೆಂದು ತೆಗೆದಿಟ್ಟಿದ್ದ ಲಕ್ಷಾಂತರ ಹಣವನ್ನು ಕಳೆದುಕೊಂಡ ರೈತ

- Advertisement -G L Acharya panikkar
- Advertisement -

ತೆಲಂಗಾಣ: ಕೃಷಿಕನೊಬ್ಬ ಶಸ್ತ್ರಚಿಕಿತ್ಸೆಗೆಂದು ತೆಗೆದಿಟ್ಟಿದ್ದ 2 ಲಕ್ಷ ರೂ.ಗಳನ್ನು ಇಲಿಗಳು ಹಾಳುಗೆಡವಿರೋ ಘಟನೆ ತೆಲಂಗಾಣದ ಮಹಬೂಬಬಾದ್ ನ ವೇಮುನೂರ್ ನಲ್ಲಿ ನಡೆದಿದೆ.

ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದ ವೇಮುನೂರ್ ಗ್ರಾಮದ ರೈತ ರೆಡ್ಯಾ ನಾಯಕ್. ಈತನಿಗೆ ತನ್ನ ಹೊಟ್ಟೆಯ ಸಮಸ್ಯೆ ಎದುರಾದ ಕಾರಣ ಶಸ್ತ್ರಚಿಕಿತ್ಸೆಗೆ 4 ಲಕ್ಷ ರೂ.ಗಳು ಬೇಕಾಗಿದ್ದವು. ಆದರೆ ಕಷ್ಟಪಟ್ಟು 2 ಲಕ್ಷ ರೂ.ಗಳನ್ನು ಹೊಂದಿಸಿದ್ದು, ಈ ಹಣವನ್ನು ಒಂದು ಬಟ್ಟೆ ಚೀಲದಲ್ಲಿ ಇಟ್ಟುಕೊಂಡಿದ್ದನು. ದುರಾದೃಷ್ಟವಶಾತ್ ಇಲಿಗಳು ಹಣವನ್ನು ಹರಿದುಹಾಕಿದೆ.

ದಿಕ್ಕುತೋಚದ ರೈತ ಹಲವಾರು ಬ್ಯಾಂಕ್ ಗಳಿಗೆ ಭೇಟಿ ನೀಡಿ ನೋಟು ಬದಲಾವಣೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾನೆ. ಆದರೆ ಹರಿದ ಈ ನೋಟುಗಳನ್ನು ಬ್ಯಾಂಕ್ ಸಿಬ್ಬಂದಿ ತೆಗೆದುಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಕಳುಹಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕನ್ನು ಸಂಪರ್ಕಿಸಲು ಸಿಬ್ಬಂದಿ ಸಲಹೆ ನೀಡಿದ್ದಾರೆ. ಮಣ್ಣಾದ ಹಾಗೂ ಹಾನಿಗೊಳಗಾದ ನೋಟು ವಿನಿಮಯ ಮಾಡಿಕೊಳ್ಳಲೂ ಆರ್ಬಿಐ ಸೂಚನೆಯಿದೆ. ಆದರೆ, ಇಲಿಗಳಿಂದ ಹಾನಿಗೊಳಗಾದ ನೋಟುಗಳ ಬಗ್ಗೆ ಆರ್ಬಿಐ ಉಲ್ಲೇಖಿಸಿಲ್ಲ ಎಂದು ಹೇಳಲಾಗಿದೆ.

- Advertisement -

Related news

error: Content is protected !!