Saturday, April 20, 2024
spot_imgspot_img
spot_imgspot_img

ಇಸ್ರೋದಿಂದ ಬಾಹ್ಯಾಕಾಶಕ್ಕೆ 8 ನ್ಯಾನೊ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್‌ವಿ-ಸಿ 54 ರಾಕೆಟ್‌ ಉಡಾವಣೆ

- Advertisement -G L Acharya panikkar
- Advertisement -

ಶ್ರೀಹರಿಕೋಟ: ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯು (ಇಸ್ರೋ) ಓಶಿಯನ್‌ಸ್ಯಾಟ್-3 ಎಂದು ಕರೆಯಲ್ಪಡುವ ಇಓಎಸ್ -06 ಮತ್ತು 8 ನ್ಯಾನೊ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್‌ವಿ-ಸಿ 54 ರಾಕೆಟ್‌ನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಬೆಳಗ್ಗೆ 11.56ಕ್ಕೆ ಉಪಗ್ರಹ ಉಡಾವಣೆಗೊಂಡಿದೆ. ಪಿಎಸ್‌ಎಲ್‌ವಿ-ಸಿ 54 ಉಪಗ್ರಹವು ಪ್ರಾಥಮಿಕ ಪೇಲೋಡ್ ಆಗಿ ಓಶಿಯನ್‌ಸ್ಯಾಟ್ ನ್ನು ಒಯ್ದಿದ್ದು, ಇನ್ನು ಎಂಟು ಉಪಗ್ರಹಗಳನ್ನು ಎರಡು ಗಂಟೆ ಕಾಲಾವಧಿಯಲ್ಲಿ ಸೂರ್ಯನ ಸಿಂಕ್ರೊನಸ್ ಕಕ್ಷೆಗಳಲ್ಲಿ ಇರಿಸಲಿದೆ. ಓಶಿಯನ್‌ಸ್ಯಾಟ್- 2 ಬಾಹ್ಯಾಕಾಶ ನೌಕೆಯ ನಿರಂತರತೆಯ ಸೇವೆಯನ್ನು ನೀಡಲಿದೆ.

ಇನ್ನು ಉಪಗ್ರಹ ಉಡಾವಣೆ ವೇಳೆ ಮೋಡ ಕವಿದ ವಾತಾವರಣ ಇದ್ದ ಕಾರಣ ವೀಕ್ಷಕರಿಗೆ ಉಡಾವಣೆಯನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಆದರೆ ಉಡಾವಣೆ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

vtv vitla
- Advertisement -

Related news

error: Content is protected !!