




ದಿಸ್ಪುರ: ಅಸ್ಸಾಂನ ಜೋರ್ಹತ್‌ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಶನಿವಾರ ಭಾರತೀಯ ವಾಯುಪಡೆಯ ಎಎನ್ -32 ಸಾರಿಗೆ ವಿಮಾನ(AN-32 Transport Aircraft) ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಗಿದೆ.
ಅಸ್ಸಾಂನ ಜೋರ್ಹತ್‌ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಶನಿವಾರ ಭಾರತೀಯ ವಾಯುಪಡೆಯ(ಐಎಎಫ್) ಎಎನ್ -32 ಸಾರಿಗೆ ವಿಮಾನ ಪತನವಾಗಿದ್ದು, ಐವರು ವಾಯುಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸಹ ಪೈಲಟ್ ಗಾಯಗೊಂಡಿದ್ದಾರೆ.
ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಶುಭಮ್ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ವಾಯು ಖೇಮರಾಮ್ ಕುಮಾವತ್ ಮತ್ತು ಅಗ್ನಿವೀರ್ವಾಯು ಡ್ಯಾನಿಶ್ ಆಲಂ ಮೃತರು ಎಂದು ಗುರುತಿಸಲಾಗಿದೆ. ಭಾರತೀಯ ವಾಯುಪಡೆ ಮೃತರಿಗೆ ಎಕ್ಸ್ ಪೋಸ್ಟ್‌ನಲ್ಲಿ ಸಂತಾಪ ಸೂಚಿಸಿದೆ.
ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸಾವುನೋವುಗಳು ಅಥವಾ ಗಾಯಾಳುಗಳ ಯಾವುದೇ ವರದಿಯಾಗಿಲ್ಲ. ಭಾರತೀಯ ವಾಯುಪಡೆಯು ಘಟನೆ ಬಗ್ಗೆ ದೃಢಪಡಿಸಿದೆ. ಎಎನ್ -32 ವಿಮಾನವು ವಾಯುಪಡೆ ನಿಲ್ದಾಣದ ಆವರಣದಲ್ಲಿ ಪತನಗೊಂಡಿದ್ದು, ಅಪಘಾತದ ನಂತರ ಬೆಂಕಿ ಹೊತ್ತಿಕೊಂಡಿತು. ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.








