Thursday, April 18, 2024
spot_imgspot_img
spot_imgspot_img

ಇಸ್ರೋದಿಂದ SSLV-D2 ರಾಕೆಟ್ ಯಶಸ್ವಿ ಉಡಾವಣೆ

- Advertisement -G L Acharya panikkar
- Advertisement -

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಣ್ಣ ಉಪಗ್ರಹ ಉಡಾವಣಾ ವಾಹನದ (ಎಸ್‌ಎಸ್‌ಎಲ್ವಿ-ಡಿ2) ಎರಡನೇ ಆವೃತ್ತಿಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್ನಿಂದ ಶುಕ್ರವಾರ ಬೆಳಿಗ್ಗೆ 9.18 ಕ್ಕೆ ಉಡಾವಣೆ ಮಾಡಿದೆ.

ಇಸ್ರೋದ ಇಒಎಸ್ -07, ಯುಎಸ್ ಮೂಲದ ಸಂಸ್ಥೆ ಅಂಟಾರಿಸ್ನ ಜಾನಸ್ -1 ಮತ್ತು ಚೆನ್ನೈ ಮೂಲದ ಬಾಹ್ಯಾಕಾಶ ಸ್ಟಾರ್ಟ್‌ಅಪ್ ಸ್ಪೇಸ್ ಕಿಡ್ಜ್ನ ಆಜಾದಿಸ್ಯಾಟ್ -2 ಎಂಬ ಮೂರು ಉಪಗ್ರಹಗಳನ್ನು 15 ನಿಮಿಷಗಳ ಹಾರಾಟದಲ್ಲಿ 450 ಕಿ.ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಲಾಗುವುದು ಅಂತ ತಿಳಿಸಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಸಣ್ಣ ಉಪಗ್ರಹ ಉಡಾವಣಾ ವಾಹನ-ಎಸ್‌ಎಸ್‌ಎಲ್ವಿ-ಡಿ 2 ಅನ್ನು ಉಡಾವಣೆ ಮಾಡಿದ್ದು, ಮೂರು ಉಪಗ್ರಹಗಳಾದ ಇಒಎಸ್ -07, ಜಾನಸ್ -1 ಮತ್ತು ಆಜಾದಿಸ್ಯಾಟ್ -2 ಉಪಗ್ರಹಗಳನ್ನು 450 ಕಿ.ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಿದೆ.

- Advertisement -

Related news

error: Content is protected !!