Sunday, May 5, 2024
spot_imgspot_img
spot_imgspot_img

ಈದ್‌ ಮಿಲಾದ್‌ ವೇಳೆ ನಡು ರಸ್ತೆಯಲ್ಲೇ ತಲ್ವಾರ್‌, ಲಾಂಗು ಹಿಡಿದು ಮುಸ್ಲಿಂ ಯುವಕರ ಡ್ಯಾನ್ಸ್‌; 19 ಜನರ ಬಂಧನ

- Advertisement -G L Acharya panikkar
- Advertisement -

ಬೆಂಗಳೂರು : ಹಿಂದೂ ವಿರೋಧಿ ಭಾಷಣದ ಹೇಳಿಕೆಗಳಿಗೆ ಡಿಜೆ ಹಾಕಿ ರಸ್ತೆಯಲ್ಲೇ ತಲ್ವಾರ್‌, ಲಾಂಗು, ಮಚ್ಚು ಹಿಡಿದು ಡ್ಯಾನ್ಸ್‌ ಮಾಡಿದ್ದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಸೋಮೇಶ್ವರ ನಗರದಲ್ಲಿ ನಡೆದಿದೆ.

ಅಕ್ಟೋಬರ್ 9ರಂದು ಈದ್ ಮಿಲಾದ್ ಹಿನ್ನೆಲೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ನಗರದ ರಸ್ತೆಯಲ್ಲಿ ಹತ್ತಾರು ಯುವಕರು ಲಾಂಗ್, ಮಚ್ಚು ಹಿಡಿದು ನೃತ್ಯ ಮಾಡಿದ್ದು, ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.

ಈ ಘಟನೆಯ ಸಂಬಂಧಿಸಿ 19 ಜನರ ಬಂಧನವಾಗಿದ್ದು, ಬಂಧಿತ 19 ಜನರಲ್ಲಿ 14 ಜನರು ಅಪ್ರಾಪ್ತರು ಎಂದು ತಿಳಿದು ಬಂದಿದೆ. ಈಗಾಗಲೇ ಸಿದ್ದಾಪುರ ಠಾಣೆ ಎದುರು ಕುಟುಂಬಸ್ಥರರು ಜಮಾಯಿಸಿದ್ದಾರೆ.

- Advertisement -

Related news

error: Content is protected !!