Saturday, April 27, 2024
spot_imgspot_img
spot_imgspot_img

ಬಜ್ಪೆ: ಸುಗಂಧ ದ್ರವ್ಯ ತಯಾರಿಕಾ ಕಂಪೆನಿಯಲ್ಲಿ ಅಗ್ನಿ ಅವಘಡ!

- Advertisement -G L Acharya panikkar
- Advertisement -

ಬಜ್ಪೆ: ಸುರತ್ಕಲ್ ಸಮೀಪದ ಕಳವಾರನಲ್ಲಿರುವ ಕ್ಯಾಟಸೆಂತ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಹೊಸದಾಗಿ ನಿರ್ಮಾಣಗೊಂಡ ಕಂಪೆನಿ ಇದಾಗಿದ್ದು, ಇಲ್ಲಿನ ಕೆಮಿಕಲ್ಸ್ ಗಳಿಗೆ ಮಧ್ಯಾಹ್ನ 1:30 ಸಮಾರಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕ್ಯಾಟಸೆಂತ್ ಫ್ಯಾಕ್ಟರಿಯ 4 ನೇ ಪ್ಲ್ಯಾಂಟ್ ನ 2ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಲ್ಲಿ ವೆಲ್ಡಿಂಗ್ ಕಾರ್ಯ ನಡೆಯುತಿತ್ತು ಎನ್ನಲಾಗಿದೆ.

ಬೆಂಕಿಯಿಂದ ಸುರತ್ಕಲ್ ಭಾಗದಲ್ಲಿ ದಟ್ಟ ಹೊಗೆ ಆವರಿಸಿದೆ. ಸುರತ್ಕಲ್ ಎಮ್ ಆರ್ ಪಿಎಲ್ ಅಗ್ನಿಶಾಮಕ ದಳದಿಂದ ಕಾರ್ಯಚರಣೆ ನಡೆಯುತ್ತಿದೆ. ಸದ್ಯ ಯಾವುದೇ ಪ್ರಾಣಾ ಅಪಾಯದ ಮಾಹಿತಿ ಇಲ್ಲ.

- Advertisement -

Related news

error: Content is protected !!