Monday, April 29, 2024
spot_imgspot_img
spot_imgspot_img

ಉಚಿತ ಘೋಷಣೆಗಳಿಗೆ ಮತದಾರರು ಬಲಿಯಾಗಬಾರದು; ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ಚುನಾವಣೆಯಲ್ಲಿ ಮತ ಸೆಳೆಯುವ ಉಚಿತ ಘೋಷಣೆಗಳಿಗೆ ಮತದಾರರು ಬಲಿಯಾಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರಪ್ರದೇಶದ ಬುಂದೇಲ್ ಖಂಡ್‌ನಲ್ಲಿ 296 ಕಿಲೋ ಮೀಟರ್ ಉದ್ದದ ಎಕ್ಸ್ ಪ್ರೆಸ್ ವೇಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಚಿತ ಘೋಷಣೆಗಳನ್ನು ರೇವ್ಡೀ ಸಂಸ್ಕೃತಿ ಎಂದು ಕರೆದಿರುವುದು ಸರಿಯಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಉಚಿತ ಕೊಡುಗೆಗಳ ಸಂಸ್ಕೃತಿ ಹೆಚ್ಚುತ್ತಿದೆ. ಯುವಕರು ಮತ್ತು ಮತದಾರರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ರೇವ್ಡಿ ಕೊಡುವುದಾಗಿ ಹೇಳುವವರಿಂದ ಎಕ್ಸ್‌ಪ್ರೆಸ್‌ ವೇ, ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದು ಸಾಧ್ಯವಿಲ್ಲ. ರಾಜ್ಯದ ಅಭಿವೃದ್ದಿಗೆ ಡಬಲ್ ಎಂಜಿನ್ ಸರ್ಕಾರವೇ ಪ್ರಯತ್ನಿಸುತ್ತದೆ ಹೊರತು ರೇವ್ಡೀ ಸಂಸ್ಕೃತಿಯವರಲ್ಲ ಎಂದು ಇದೇ ವೇಳೆ ಆಮ್ ಆದ್ಮಿ ಪಕ್ಷವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಉಚಿತ ವಿದ್ಯುತ್‌ನ್ನು ಎರಡೂ ರಾಜ್ಯದಲ್ಲಿ ನೀಡುವುದಾಗಿ ಆಮ್ ಆದ್ಮಿ ಪಕ್ಷ ತಿಳಿಸಿತ್ತು.

- Advertisement -

Related news

error: Content is protected !!