Tuesday, June 23, 2026
spot_imgspot_img
spot_imgspot_img

ಕ್ಷುಲ್ಲಕ ಕಾರಣಕ್ಕೆ ಮನನೊಂದು ಬಾಲಕಿ ಆತ್ಮಹತ್ಯೆ!

- Advertisement -
- Advertisement -

ಮುಂಬೈ: ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುವ ವಿಚಾರವಾಗಿ ಸಹೋದರನೊಂದಿಗೆ ಜಗಳವಾಡಿದ 16 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಮುಂಬೈನಲ್ಲಿ ನಡೆದಿದೆ.

ಮೃತ ಬಾಲಕಿಯು ತನ್ನ ಪೋಷಕರು ಮತ್ತು ನಾಲ್ವರು ಒಡಹುಟ್ಟಿದವರೊಂದಿಗೆ ಕಾಂಡಿವಿಲಿ ಪೂರ್ವದಲ್ಲಿರುವ ಅವರ ಜನಪೌದ ನಿವಾಸದಲ್ಲಿ ವಾಸಿಸುತ್ತಿದ್ದರು. ಮೊಬೈಲ್ ನಲ್ಲಿ ಆಡುತ್ತಿದ್ದ ಸಹೋದರನೊಂದಿಗೆ ವಾಗ್ವಾದಕ್ಕಿಳಿದ ಬಾಲಕಿ ತಾನು ವಿಡಿಯೋ ಗೇಮ್ ಆಡಬೇಕು, ಮೊಬೈಲ್ ಕೊಡುವಂತೆ ಜಗಳವಾಡಿದ್ದಾಳೆ. ಮೊಬೈಲ್ ಸಿಗದಿದ್ದಕ್ಕೆ ಕೋಪಗೊಂಡು ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆಂದು ತಿಳಿದುಬಂದಿದೆ.

- Advertisement -

Related news

error: Content is protected !!