Sunday, May 19, 2024
spot_imgspot_img
spot_imgspot_img

ಉಜ್ವಲ 2.0 ಯೋಜನೆಗೆ ಚಾಲನೆ; ಇದುವರೆಗೂ 8 ಕೋಟಿ ಎಲ್​ಪಿಜಿ ಸಂಪರ್ಕ ಕಲ್ಪಿಸಿದ್ದೇವೆ; ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಉಜ್ವಲ 2.0 ಯೋಜನೆಗೆ ಚಾಲನೆ ನೀಡಿ, ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಈ ವೇಳೆ ಮಾತಾಡಿದ ಪ್ರಧಾನಿ ಮೋದಿ, ಹಳ್ಳಿಗಳಲ್ಲಿ ಮಹಿಳೆಯರು ಇನ್ನೂ ಒಲೆಯನ್ನೇ ಬಳಸಿ ಅಡುಗೆ ಮಾಡುತ್ತಿದ್ದಾರೆ. ಈ ಮೂಲಕ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಮಹಿಳೆಯರ ಈ ಕಷ್ಟವನ್ನು ತಪ್ಪಿಸಿ ಗ್ರಾಮೀಣ ಪ್ರದೇಶಗಳಿಗೂ ಎಲ್​ಪಿಜಿ ಗ್ಯಾಸ್​ ಕನೆಕ್ಷನ್​ ಕೊಡುವ ಉದ್ದೇಶ ಸರ್ಕಾರದ್ದು. ಆದ್ದರಿಂದಲೇ ಉಜ್ವಲ ಯೋಜನೆ ಪರಿಚಯಿಸಿದ್ದೇವೆ ಎಂದರು.

ಉಜ್ವಲ್​​​ ಯೋಜನೆ 2.0 ಮೂಲಕ 8 ಕೋಟಿ ಕುಟುಂಬದ ಮಹಿಳೆಯರಿಗೆ ಎಲ್​ಪಿಜಿ ಸಂಪರ್ಕ ಕೊಡಬೇಕು ಎಂಬ ಗುರಿ ಹೊಂದಿದ್ದೆವು. ಕಳೆದ 2019ರಲ್ಲೇ ಈ ಗುರಿಯನ್ನು ಕೇಂದ್ರ ತಲುಪಿತ್ತು. ಇತ್ತೀಚೆಗಿನ ಲೆಕ್ಕಚಾರದ ಪ್ರಕಾರ ಇಲ್ಲಿಯವರೆಗೆ 79,995,022 ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಗ್ಯಾಸ್​ ಸಂಪರ್ಕ ಸಿಕ್ಕಿದೆ ಎಂದು ಮೋದಿ ಹೇಳಿದರು.

ಬಡತನ ರೇಖೆಗಿಂತ ಕಡಿಮೆ ಇರುವ ಮಹಿಳೆಯರಿಗೆ ಎಲ್​ಪಿಜಿ ಗ್ಯಾಸ್ ಸೌಲಭ್ಯ ಒದಗಿಸುವ ಗುರಿ ನಮ್ಮದು. ಎಸ್​ಸಿ/ಎಸ್​ಟಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY), ಅಂತ್ಯೋದಯ ಅನ್ನ ಯೋಜನೆಯ (AAY) ಫಲಾನುಭವಿಗಳು ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳಿಗೂ ಈ ಯೋಜನೆ ಸಿಗಲಿದೆ ಎಂದು ತಿಳಿಸಿದರು.

- Advertisement -

Related news

error: Content is protected !!