Monday, November 9, 2026
spot_imgspot_img
spot_imgspot_img

ಗುಜರಾತಿನಲ್ಲಿ ನವೆಂಬರ್ 6ರಂದು ಪ್ರಧಾನಿ ಮೋದಿ ಚುನಾವಣಾ ಪ್ರಚಾರ

- Advertisement -
- Advertisement -

ಗುಜರಾತ್ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗಿದೆ. ಎರಡು ಹಂತಗಳಲ್ಲಿ ಇಲ್ಲಿ ಚುನಾವಣೆ ನಡೆಯಲಿದ್ದು , ಮುಂದಿನ ಭಾನುವಾರ ಅಂದರೆ ನವೆಂಬರ್ 6ರಂದು ಪ್ರಧಾನಿ ನರೇಂದ್ರ ಮೋದಿ ಗುಜರಾತಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಚುನಾವಣಾ ದಿನಾಂಕ ಪ್ರಕಟವಾದ ನಂತರ ಮೋದಿಯವರ ಮೊದಲ ಗುಜರಾತ್ ಭೇಟಿ ಇದಾಗಲಿದೆ.

ಡಿಸೆಂಬರ್ 1 ಮತ್ತು 5 ರಂದು ಗುಜರಾತಿನಲ್ಲಿ ಚುನಾವಣೆ ನಡೆಯಲಿದೆ. ಭಾವ್ ನಗರ , ಸುರೇಂದ್ರನಗರ ಮತ್ತು ವಲ್ಸಾದ್‌ನಲ್ಲಿ ನಡೆಯುವ ರ್ಯಾಲಿಯನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಎರಡು ದಶಕಗಳಿಂದ ಬಿಜೆಪಿ ಅಧಿಕಾರದಲ್ಲಿದ್ದ ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಸಲಾಗುವುದು. 135 ಮಂದಿ ಸಾವಿಗೀಡಾದ ಮೊರ್ಬಿ ಸೇತುವೆ ಕುಸಿತದ ಒಂದು ವಾರದ ನಂತರ ಚುನಾವಣಾ ಪ್ರಚಾರಕ್ಕಾಗಿ ಮೋದಿ ಭೇಟಿ ನೀಡುತ್ತಿದ್ದಾರೆ. ಈ ವಾರ, ಗುಜರಾತ್ ಪ್ರವಾಸದಲ್ಲಿದ್ದ ಪ್ರಧಾನ ಮಂತ್ರಿ, ಸೇತುವೆ ಕುಸಿತದ ಸ್ಥಳವನ್ನು ವೀಕ್ಷಿಸಿ, ಸಂತ್ರಸ್ತರ ಜತೆ ಮಾತನಾಡಿದ್ದಾರೆ.

1998 ರಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 2014 ರಲ್ಲಿ ಪ್ರಧಾನಿಯಾಗುವ ಮೊದಲು ಮೋದಿ ಸುಮಾರು 13 ವರ್ಷಗಳ ಕಾಲ ಅದರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಗೃಹ ಸಚಿವ ಅಮಿತ್ ಶಾ ಕಳೆದ ತಿಂಗಳು ಭವಿಷ್ಯ ನುಡಿದಿದ್ದರು. ಕಳೆದ ಐದು ವರ್ಷಗಳ ಹಿಂದೆ ನಡೆದ ರಾಜ್ಯ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 77 ಸ್ಥಾನಗಳನ್ನು ಗಳಿಸಿತ್ತು.

ನಿರುದ್ಯೋಗದ ಬಗ್ಗೆ ಟೀಕೆಗಳನ್ನು ಎದುರಿಸುತ್ತಿರುವ ಬಿಜೆಪಿಯು ಗುಜರಾತ್‌ನಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಬೃಹತ್ ಯೋಜನೆಗಳನ್ನು ಘೋಷಿಸಿದೆ, ಇದರಲ್ಲಿ ವೇದಾಂತ ಲಿಮಿಟೆಡ್ ಮತ್ತು ತೈವಾನ್‌ನ ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಪ್ಲಾಂಟ್‌ಗಳನ್ನು ಸ್ಥಾಪಿಸಲು 1.54 ಟ್ರಿಲಿಯನ್ ರೂಪಾಯಿ ($18.58 ಶತಕೋಟಿ) ಹೂಡಿಕೆ ಮಾಡಿತು.

- Advertisement -

Related news

error: Content is protected !!