Tuesday, April 30, 2024
spot_imgspot_img
spot_imgspot_img

ಉಡುಪಿ: ಆನ್ ಲೈನ್ ದೋಖಾ; 13 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಮಹಿಳೆ

- Advertisement -G L Acharya panikkar
- Advertisement -
suvarna gold

ಉಡುಪಿ: ಆನ್ ಲೈನ್ ಮೂಲಕ ಹಣ ಕಳೆದುಕೊಂಡು ಮಹಿಳೆಯೊಬ್ಬರು ವಂಚನೆಗೊಳಗಾಗಿರುವ ಘಟನೆ ನಡೆದಿದೆ.

ದುಬೈಯಲ್ಲಿ ವಾಸವಾಗಿರುವ ಗುಂಡಿಬೈಲು ಮೂಲದ ನಿವಾಸಿ ಕ್ಲೊಟಿಲ್ಡಾ ಡಿಕೊಸ್ತಾ (68) ಎಂಬವರು ಊರಿಗೆ ಬಂದಿದ್ದು, ಇವರಿಗೆ ಡಿ.2ರಂದು ಮೇಸೆಂಜರ್ ಮೂಲಕ ರೊಮಾನಿಯ ದೇಶದ ಇಂಗ್ಲೆಂಡ್‌ನಲ್ಲಿ ವೈದ್ಯಕೀಯ ವೃತ್ತಿ ಮಾಡಿಕೊಂಡಿರುವುದಾಗಿ ಹೇಳಿಕೊಂಡ ಫಿಲಿಪ್ ಜೇಮ್ಸ್ ಎಂಬಾತನ ಪರಿಚಯ ವಾಗಿತ್ತು. ಈತ ವಾಟ್ಸ್ ಆಪ್ ಕರೆ ಮಾಡಿ , ಮೆಸೇಜ್ ಮೂಲಕ ಮಾತನಾಡುತ್ತಿದ್ದ.

ಡಿ.20ರಂದು ಫಿಲಿಪ್ ಜೇಮ್ಸ್ ತಾನು ನವದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದು, ತನ್ನನ್ನು ಕಸ್ಟಮ್‌ ನವರು ಹಿಡಿದಿಟ್ಟಿದ್ದಾರೆ, ನನಗೆ ಡಾಲರ್‌ನ್ನು ಇಂಡಿಯನ್ ಕರೆನ್ಸಿಗೆ ಬದಲಾಯಿಸಲು ಆಗುವುದಿಲ್ಲ ಎಂದು ಕ್ಲೊಟಿಲ್ಡಾ ಡಿಕೋಸ್ತ ನಂಬಿಸಿದನು. ಹೀಗೆ ಮೋಸದಿಂದ ಆತ ಕ್ಲೊಟಿಲ್ಡಾ ಅವರಿಂದ ಹಂತಹಂತವಾಗಿ ಒಟ್ಟು 13,70,042 ರೂ. ಹಣವನ್ನು ಖಾತೆಗೆ ಹಾಕಿಸಿ, ಬಳಿಕ ಯಾವುದೇ ಕರೆಗಳನ್ನು ಸ್ವೀಕರಿಸದೆ ವಂಚನೆ ಮಾಡಿದ್ದಾನೆ ಎಂದು ದೂರಲಾಗಿದ್ದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!