Monday, May 6, 2024
spot_imgspot_img
spot_imgspot_img

ಉಡುಪಿ: ಎಣ್ಣೆ ನಶೆಯಲ್ಲಿ ಯುವತಿಯ ಬೀದಿ ರಂಪಾಟ; ಜೊತೆಗಿದ್ದ ಯುವಕನಿಗೂ ಚಪ್ಪಲಿ ಏಟು ನೀಡಿದ ನಶೆರಾಣಿ

- Advertisement -G L Acharya panikkar
- Advertisement -

ಉಡುಪಿ: ಯುವತಿಯೊಬ್ಬಳು ಕುಡಿದ ಅಮಲಿನಲ್ಲಿ ಸಾರ್ವಜನಿಕರೊಂದಿಗೆ ರಂಪಾಟ ಮಾಡಿ, ಹಲ್ಲೆ ಮಾಡಲು ಮುಂದಾದ ಘಟನೆ ಡಿಸಿ ಆಫೀಸ್ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಯುವತಿಯ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಹೊರರಾಜ್ಯದಿಂದ ಆಗಮಿಸಿರುವ ಯುವತಿ ನಶೆ ಏರಿಸಿಕೊಂಡು ಯುವಕನೊಂದಿಗೆ ಫಿಜ್ಜಾ ಶಾಪ್ ಗೆ ಆಗಮಿಸಿದ್ದಾಳೆ. ಕುಡಿದ ಮತ್ತಿನಲ್ಲಿದ್ದ ಯುವಕ ಯುವತಿ ಪಿಝಾ ಶಾಪ್ ಸಿಬ್ಬಂದಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದು, ಗಲಾಟೆ ಎಬ್ಬಿಸಿದ್ದಾಳೆ. ಈ ಇಬ್ಬರನ್ನು ಪಿಜ್ಜಾ ಶಾಪ್ ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ. ಆದರೆ ಈ ಸಂದರ್ಭ ಪಿಜ್ಜಾ ಶಾಫ್ ಹೊರ ಬಂದು ಸಿಬ್ಬಂದಿಯ ಮೇಲೆ ಹಲ್ಲೆಗೆ ಯುವತಿ ಮುಂದಾಗಿದ್ದಾಳೆ.

ಈ ವೇಳೆ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಯುವತಿಯ ತಲೆಗೆ ತಣ್ಣೀರು ಹಾಕಿ ನಶೆ ಇಳಿಸಲು ಪ್ರಯತ್ನಿಸಿದ್ದು, ಇದರಿಂದ ಸಿಟ್ಟುಗೊಂಡ ಆಕೆ ಸಾರ್ವಜನಿಕರ ಮೇಲೂ ಹಲ್ಲೆಗೆ ಮುಂದಾಗಿದ್ದಾಳೆ.

ವಿಪರೀತ ಮದ್ಯ ಸೇವನೆಯಿಂದಾಗಿ ನಿಂತಲ್ಲಿ ನಿಲ್ಲಲಾಗದೆ ತೂರಾಡುತ್ತಾ ರಸ್ತೆಯಲ್ಲಿ ಬೀಳುತ್ತಿದ್ದಳು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇನ್ನು ಜೊತೆಗಿದ್ದ ಯುವಕನ ಮೇಲೂ ಚಪ್ಪಲಿ ಏಟು ನೀಡಿದ್ದಾಳೆ. ಕೊನೆಗೆ ಮಣಿಪಾಲ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದರು. ಯುವತಿಯ ಬೀದಿ ರಂಪಾಟದ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

vtv vitla
- Advertisement -

Related news

error: Content is protected !!