Thursday, May 9, 2024
spot_imgspot_img
spot_imgspot_img

ಉಡುಪಿ: ಕೋಟ್ಯಾಂತರ ರೂ. ವಂಚನೆ ಪ್ರಕರಣ; ಇಬ್ಬರ ಬಂಧನ

- Advertisement -G L Acharya panikkar
- Advertisement -

ಉಡುಪಿ: ಮೈಸೂರಿನ ಆವಿಷ್ಕಾರ್ ಜೀವನ್ ವಿವಿದ್ದೋದ್ದೇಶ ಸಹಕಾರ ಸಂಘದ ಉಡುಪಿ ಶಾಖೆಯಲ್ಲಿ ನಡೆದ 1.25 ಕೋಟಿ ರೂ.ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನಿರ್ದೇಶಕನನ್ನು ಹಾಗೂ ಸಂಘದ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸಂಘದ ಅಧ್ಯಕ್ಷ ಲೋಕೇಶ್ ಮತ್ತು ನಿರ್ದೇಶಕ ದಿಲೀಪ್ ಸುಪ್ಪೆಕಾರ್ ಎಂದು ಗುರುತಿಸಲಾಗಿದೆ.

ಲೋಕೇಶ್ ಮತ್ತು ದಿಲೀಪ್ ಸುಪ್ಪೆಕಾರ್ ಮೈಸೂರಿನ ಆವಿಷ್ಕಾರ್ ಜೀವನ್ ವಿವಿದ್ದೋದ್ದೇಶ ಸಹಕಾರ ಸಂಘದ ಶಾಖೆಯನ್ನು ಉಡುಪಿಯಲ್ಲಿ ತೆರೆದಿದ್ದು, ಸಂಘದಲ್ಲಿ ಶೇರು ಬಂಡವಾಳ ಮತ್ತು ಠೇವಣಿದಾರರಿಂದ 3 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿದ್ದರು. ಬಳಿಕ ಅವ್ಯವಹಾರದ ಬಗ್ಗೆ ಮಾಹಿತಿ ತಿಳಿದ ಠೇವಣಿದಾರರು ಹಣವನ್ನು ಹಿಂಪಡೆದಿದ್ದರು. ಆದರೂ ಕೆಲವೊಂದು ಕಾರಣ ನೀಡಿ ಶೇರು ಬಂಡವಾಳ ಮತ್ತು ನಿರಖು ಠೇವಣಿಗಳನ್ನು ಗ್ರಾಹಕರಿಗೆ ನೀಡದೆ ವಂಚಿಸಿ ಬಳಿಕ ಉಡುಪಿ ಶಾಖೆಯನ್ನು ಮುಚ್ಚಿದ್ದರು.

ಇನ್ನು ಈ ವಂಚನೆ ಬಗ್ಗೆ ಹೂಡಿಕೆದಾರರಾದ ಬ್ರಹ್ಮಾವರದ ಅನಂತ ನಾಯಕ್ ಅವರು ಉಡುಪಿ ನಗರ ಠಾಣೆಯಲ್ಲಿ ಸಂಘದ ಅಧ್ಯಕ್ಷ ಲೋಕೇಶ್ ಸಹಿತ 17 ಮಂದಿ ನಿರ್ದೇಶಕರ ವಿರುದ್ಧ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ಉಡುಪಿ ಪೊಲೀಸರು ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕನನ್ನು ಮೈಸೂರಿನಲ್ಲಿ ಬಂಧಿಸಿ ಉಡುಪಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!