Sunday, June 14, 2026
spot_imgspot_img
spot_imgspot_img

ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ನ ಓವರ್ ಟೇಕ್ ಮಾಡುವ ವೇಳೆ ಪೊಲೀಸ್ ಜೀಪ್ ಪಲ್ಟಿ; ಇಬ್ಬರಿಗೆ ಗಾಯ..!

- Advertisement -
- Advertisement -

ಪೊಲೀಸ್ ವಾಹನವು ಪಲ್ಟಿಯಾಗಿದ್ದು, ಇಬ್ಬರು ಪೇದೆಗಳು ಗಾಯಗೊಂಡಿರುವ ಘಟನೆ ರಾಯಚೂರಿನ ‌ಸಿಂಧನೂರು ತಾಲೂಕಿನ ರೈತನಗರ ಕ್ಯಾಂಪ್ ಬಳಿ ಅಪಘಾತ ನಡೆದಿದೆ.

ಅಪಘಾತ ಗಾಯಗೊಂಡ ಪೇದೆಗಳಾದ ಶಕ್ಷವಲಿ (33), ಕರಿಯಪ್ಪ(35) ಎಂದು ಗುರುತಿಸಲಾಗಿದೆ.

ಮರಳಿನ ಟ್ಯಾಂಕರ್ ಓವರ್ ಟೇಕ್ ಮಾಡಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಪೊಲೀಸ್‌ ವಾಹನವು ರಸ್ತೆ ಬದಿಯಿಂದ ಪಕ್ಕದ ಗುಂಡಿಗೆ ಪಲ್ಟಿ ಹೊಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಣ್ಣ-ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಂಧನೂರು ಟ್ರಾಫಿಕ್ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

- Advertisement -

Related news

error: Content is protected !!